Breaking News

ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದೊಂದು ಸಮಾಜಕ್ಕೆ ಮಾತ್ರ ಸೀಮಿತವಾಗಿವೆ : ಜೋಶಿ

ಧಾರವಾಡ: ನಾಡಿನ ಎಲ್ಲ ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದೊಂದು ಸಮಾಜಕ್ಕೆ ಮಾತ್ರ ಸೀಮಿತವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದರು.

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನಕದಾಸರ ಜಯಂತಿ ಬಂದಾಗ ಕುರುಬರು, ಬಸವ ಜಯಂತಿ ಬಂದಾಗ ಲಿಂಗಾಯತರು, ಅಂಬೇಡ್ಕ‌ರ್ ಜಯಂತಿ ಬಂದಾಗ ಹರಿಜನರು, ರಾಮಾನುಜಾಚಾರ್ಯರ ಜಯಂತಿ ಬಂದಾಗ ವೈಷ್ಣವರು, ಶಂಕರಾಚಾರ್ಯರ ಜಯಂತಿ ಬಂದಾಗ ಬ್ರಾಹ್ಮಣರು, ವಾಲ್ಮೀಕಿ ಜಯಂತಿ ಬಂದಾಗ ವಾಲ್ಮೀಕಿ ಜನಾಂಗದವರು ಜಯಂತಿಗಳನ್ನು ಆಚರಿಸುವಂತಾಗಿದೆ. ಇದು ನಮ್ಮ ದುರ್ದೈವ. ಈ ಜಾತಿ ವ್ಯವಸ್ಥೆ ಹೋಗಲಾಡಿಸಲು ರಾಮಾನುಜಾಚಾರ್ಯರು ಪ್ರಯತ್ನ ಮಾಡಿದ್ದರು. ಅದಕ್ಕೆ ಬಲ ಕೊಡುವ ಕೆಲಸ ಮಾಡಿದ್ದರ ಬಗ್ಗೆ ಸ್ವತಃ ಕನಕದಾಸರೇ ಹೇಳಿದ್ದಾರೆ ಎಂದರು.

ಕನಕದಾಸರ ಜಯಂತಿಗೆ ಒಂದು ಸಭಾಭವನ ತುಂಬಿಲ್ಲ. ನಾವು ರಾಜಕಾರಣಿಗಳು ವೋಟು ಹಾಕೋದಿಲ್ಲ ಎಂದು ರಜೆ ಘೋಷಣೆ ಮಾಡುತ್ತೇವೆ. ಎಲ್ಲ ಜಯಂತಿಗೂ ರಜೆ ಘೋಷಣೆ ಮಾಡುತ್ತೇವೆ. ರಜೆ ತೆಗೆದುಕೊಂಡು ಜನ ಮನೆಯಲ್ಲಿ ಅರಾಮಾಗಿ ಇರುತ್ತಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *