Breaking News

ನ.24 ರಂದು ಉಚಿತ ಆರೋಗ್ಯ ಶಿಬಿರ

ನವಲಗುಂದ : ಪಟ್ಟಣದಲ್ಲಿ ನ.24 ಭಾನುವಾರದಂದು ಅಜಾತ ನಾಗಲಿಂಗ ಮಹಾಸ್ವಾಮಿಗಳ ಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠ, ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಹಾಗೂ ತುರ್ತು ಚಿಕಿತ್ಸಾ ಕೇಂದ್ರ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿದೆ.

ಉಚಿತ ಆರೋಗ್ಯ ಶಿಬಿರದಲ್ಲಿ ಬೋನ್ ಡೆನ್ಸಿಟಿ, ರಕ್ತದೊತ್ತಡ, ಸಕ್ಕರೆ ಖಾಯಿಲೆ ತಪಾಸಣೆ, ಫಿಜಿಶಿಯನ್ನರು, ಹೃದ್ರೋಗ, ನರರೋಗ, ಎಲುಬು-ಕೀಲು, ವಿಶೇಷವಾಗಿ ಆಹಾರ ಪದ್ಧತಿ ಮತ್ತು ತೂಕ ಇಳಿಸುವ ಬಗ್ಗೆ ತಿಳುವಳಿಕೆ ಕುರಿತು ವಿಶೇಷ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಸಲಹೆ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ವೀರೇಂದ್ರಸ್ವಾಮಿಗಳು ವಹಿಸುವರು, ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞರಾರು, ಬಾಲಾಜಿ ಆಸ್ಪತ್ರೆಯ ಚೇರ್ಮನ್ ರಾದ ಡಾ.ಕ್ರಾಂತಿಕಿರಣರವರ ನೇತೃತ್ವದಲ್ಲಿ ಜರುಗಲಿದೆ ಎಂದು ಪ್ರಕಟಣೆಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಮಠದ ಸಿಬ್ಬಂದಿಗಳು ಮತ್ತು ಹಾದಿ ಬಸವೇಶ್ವರ ಸೇವಾ ಸಂಘ(ಬಸವೇಶ್ವರ ನಗರ) ಪ್ರಕಟಣೆಗೆ ತಿಳಿಸಿದ್ದಾರೆ.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *