Breaking News

ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ

ಹುಬ್ಬಳ್ಳಿ: ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್’ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೂಲ್ವಿ ಬಳಿಯ ಫುಲ್ ಬಳಿಯಲ್ಲಿ ನಡೆದಿದೆ.ಗಾಯಗೊಂಡವರನ್ನು ಜಾಹಿರ್, ಅಬ್ದುಲ್ ಎಂದು ಗುರುತಿಸಲಾಗಿದ್ದು, ಆಕಳಿನ ಬೆನ್ನೆಯನ್ನು ತೆಗೆದುಕೊಂಡು ಅಕ್ಕನ ಮನೆಗೆ ಹೋಗುತ್ತಿದ್ದಾಗ ಈ ಒಂದು ದುರ್ಘಟನೆ ನಡೆದಿದೆ.

ಅದರಗುಂಚಿಯಿಂದ ನೂಲ್ವಿಯತ್ತ ಹೋಗುತ್ತಿದ್ದ ಬೈಕ್’ಗೆ ನೂಲ್ವಿಯಿಂದ ಅದರಗುಂಚಿಯತ್ತ ಬರುತ್ತಿದ್ದ ಆಟೋ ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕನ ಅತಿಯಾದ ವೇಗವೇ ಡಿಕ್ಕಿಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

Share News

About bigtvnews22

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *