Breaking News
Featured Video Play Icon

ಕ್ಷುಲ್ಲಕ ಕಾರಣಕ್ಕೆ ಹರಿಯುತ್ತಿದೆ ನೆತ್ತರು: ಎಗ್ಗಿಲ್ಲದೇ ಓಡಾಡುತ್ತಿವೆ ಚಾಕು, ತಲ್ವಾರ್..!

ಕೊಲೆಗಡುಕರ ಸದ್ದು ಅಡಗಿಸಲು ಕಾಕಿ ಪಡೆ ಹರ ಸಾಹಸ..!!!ಕ್ರೈಂ ಬೀಟ್ ಪೊಲೀಸರ ಅಸಹಾಯಕತೆಗೆ ಅಧಿಕಾರಿಗಳಿಗೆ ಕಳಂಕ ಅವಳಿ ನಗರದ ಕಾನೂನು ಬಾಹಿರ ಕೃತ್ಯಗಳಿಗೆ ಅಂತ್ಯ ಹಾಡಲು ಮುಂದಾದ ಕಮಿಷನರ್

ಹುಬ್ಬಳ್ಳಿ: ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡು ಒಂದು ಕಾಲದಲ್ಲಿ‌ ಛೊಟಾ ಬಾಂಬೆ ಅಂತಲೇ ಕರೆಸಿಕೊಳ್ಳುತ್ತಿದ ಹುಬ್ಬಳ್ಳಿ ನಗರ . ಇಂದು ಸದ್ದು ಮಾಡುತ್ತಿರುವದು ಲಾಂಗು ಮತ್ತು ಚಾಕುವಿನಿಂದ .. ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ನೆತ್ತರು ಹರಿಯುತ್ತಿದೆ. ಪುಡಿರೌಡಿಗಳ ಹಾವಳಿ ಒಂದು ಕಡೆಯಾದರೇ, ಮತ್ತೊಂದು ಕಡೆಯಲ್ಲಿ ಜನಸಾಮಾನ್ಯರೂ ಕೂಡ ಕ್ರೈಮ್ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ, ಸಣ್ಣ ಪುಟ್ಟ ಕಾರಣಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಲಾ ಆ್ಯಂಡ್ ಆರ್ಡರ್ ವ್ಯವಸ್ಥೆ ಹಳ್ಳ ಹಿಡಿದಂತಾಗಿದೆ. ಅದೆಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ ಕೂಡ ಅವಳಿನಗರದ ಲಗಾಮು ಪೊಲೀಸರ ಕೈಗೆ ಸಿಗದೇ ಇರುವುದರಿಂದ ಗೃಹ ಇಲಾಖೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ… ಅವಳಿನಗರದ ದಿನವೊಂದಕ್ಕೂ ಕೊಲೆ, ದರೋಡೆ, ಚಾಕು ಇರಿತ, ಮೀಟರ್ ಬಡ್ಡಿ ಕುಳಗಳ ಅಟ್ಟಹಾಸ ಮಿತಿಮೀರಿದೆ. ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಆಟಿಕೆಯಂತಾಗಿವೆ. ಸಾಮಾನ್ಯರೂ ಸಲೀಸಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಮೂರು ಕೊಲೆಗಳಾದ್ರೆ, ಒಂದೇ ದಿನದಲ್ಲಿ ಎರಡು ಕೊಲೆ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಒಂದು ಕೌಟುಂಬಿಕ ಕಲಹದ ಕೊಲೆಯಾದರೇ ಮತ್ತೊಂದು ಕ್ಷುಲ್ಲಕ ಕಾರಣಕ್ಕೆ ಮಾರಾಕಸ್ತ್ರಗಳಿಂದ ಕೊಲೆಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ರೇಣುಕಾ ಸುಕುಮಾರ್ ಪೊಲೀಸ್ ಆಯುಕ್ತರು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಕಾನೂನು ಬಾಹಿರ ಕೃತ್ಯಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿವೆ.‌ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮಗಳನ್ನು ಜರುಗಿಸುತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹೈ ಅಲರ್ಟ್ ಆಗುವ ಖಾಕಿ ರೌಡಿಶೀಟರ್ ಗಡಿಪಾರು ಮಾಡುತ್ತದೇ. ಆದರೆ ರೌಡಿಶೀಟರ್ ಕಡಿವಾಣ ಮಾತ್ರ ಸಾಧ್ಯವಾಗುತ್ತಿಲ್ಲ. ಆದರೆ ಪೊಲೀಸ್ ಆಯುಕ್ತರು ಮಾತ್ರ ಯಾವುದೇ ಕೇಸ್ ನ್ನು ಕೈ ಬಿಟ್ಟಿಲ್ಲ ಎನ್ನುತ್ತಾರೆ.ರೇಣಕಾ ಸುಕುಮಾರ್ ಪೊಲೀಸ್ ಆಯುಕ್ತರುಒಟ್ಟಿನಲ್ಲಿ ಕ್ರೈಂ ಪ್ರಕರಣಗಳು ದಿನವೊಂದಕ್ಕೆ ಹೆಚ್ಚುತ್ತಿದ್ದು, ಜನರು ಯಾವ ಸಮಯದಲ್ಲಿ ಏನಾಗುತ್ತದೆಯೋ ಎಂಬುವಂತ ಆತಂಕದಲ್ಲಿಯೇ ಓಡಾಡುವಂತಾಗಿದೆ. ಇನ್ನಾದರೂ ರಾಜ್ಯದ ಗೃಹ ಸಚಿವರು ಹಾಗೂ ಪೊಲೀಸ್ ಕಮೀಷನರೇಟ್ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ…

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *