Breaking News

ವಾಹನ ಆಕ್ಸಿಡೆಂಟ್, 25 ಜನರಿಗೆ ಗಾಯ

ಕುಂದಗೋಳ : ಅತಿವೇಗವಾಗಿ ಮಿನಿ ಬಸ್ ಚಲಾಯಿಸಿಕೊಂಡು ಚಾಲಕನೋರ್ವ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ಬೋಲೆರೊ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ ಕುಂದಗೋಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು ! ಹುಬ್ಬಳ್ಳಿ ಎಡೆಗೆ ಹೊರಟಿದ್ದ ಮಿನಿ ಬಸ್‌ ಚಾಲಕ ಸಣ್ಣಗೋವಿಂದಪ್ಪ ಅಮಾತಿ ಎಂಬಾತ ತನ್ನ ಮುಂದೆ ರಸ್ತೆ ಮೇಲೆ ಹೊರಟಿದ್ದ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ಬೋಲೆರೊ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದಾನೆ. ಈ ವೇಳೆ ಬೋಲೆರೊ ವಾಹನದಲ್ಲಿ ಹೊರಟಿದ್ದ 20-25 ಜನರಿಗೆ ಸಾಧಾರಣ ಗಾಯಗಳಾಗಿದ್ದು, ಬೋಲೆರೊ ವಾಹನ ಜಖಂ ಆಗಿದೆ.

ಈ ಪ್ರಕರಣದ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿಸೇಂಬರ್ 5 ರಂದು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಘಟನೆ ದಿನವೇ ಚಿಕಿತ್ಸೆ ನೀಡಲಾಗಿದೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *