ನವಲಗುಂದ: ವಾಹನ ಸಾಲಗಾರರಿಗೆ ಕೀ ವಿತರಿಸಿ, ಬ್ಯಾಂಕಿನಿಂದ ವಿತರಿಸಿದ ಹೊಸ ಟ್ರ್ಯಾಕ್ಟರ್ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ರತ್ನ ಪುರಸ್ಕೃತ ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಸಂತಿ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ, ಸಹಕಾರಿ ರತ್ನ ಪುರಸ್ಕೃತ ಎ.ಬಿ.ಉಪ್ಪಿನ ಹಾಗೂ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿ.ಕೆ.ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.
ಕೆಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸುನಿತಾ ಸಿದ್ರಾಮ ಬ್ಯಾಂಕಿನ ಪಕ್ಷಿನೋಟದ ವಿವರಣೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಸಿ.ಜಿ. ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ತಡಸದ, ಎಂ.ಬಿ.ಪೂಜಾರ, ಎಂ.ಎಸ್.ಮೆಣಶಿನಾಳ, ಬ್ಯಾಂಕಿನ ಸಿಬಂದಿ ಭಾಗವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





