Breaking News

ಮಹಿಳಾ ಜನಸ್ನೇಹಿ ಯೋಜನೆ ಅನುಷ್ಠಾನ: ಕೇಂದ್ರದ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾದ ಕಿನ್ನಾಳ ಗ್ರಾಮ ಪಂಚಾಯತಿ

ಕೊಪ್ಪಳ: ಮಹಿಳಾ ಸ್ನೇಹಿ ಯೋಜನೆಗಳನ್ನು ರೂಪಿಸುವಲ್ಲಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಕೇಂದ್ರದ ರಾಷ್ಟ್ರೀಯ ಪಂಚಾಯಿತಿ ಪುರಸ್ಕಾರಕ್ಕೆ ಭಾಜನವಾಗಿದೆ.
2022-23ನೇ ಸಾಲಿನಲ್ಲಿ ಆಯಾ ಪಂಚಾಯಿತಿಗಳು ಮಾಡಿದ ಸಾಧನೆಯನ್ನು ಪರಾಮರ್ಶಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.
ವಿವಿಧ ವಿಷಯಗಳನ್ನು ಆಧರಿಸಿ ಒಂಬತ್ತು ವಿಭಾಗದಲ್ಲಿ ಒಂಬತ್ತು ಪಂಚಾಯಿತಿಗಳನ್ನು ಭಾರತ ಸರ್ಕಾರದ ಪಂಚಾಯತ್‌ ರಾಜ್‌ ಮಂತ್ರಾಲಯಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಕಿನ್ನಾಳ ಗ್ರಾ.ಪಂ.ಗೆ ಮಹಿಳಾ ಸ್ನೇಹಿ ವಿಭಾಗದಲ್ಲಿ ಪುರಸ್ಕಾರ ಲಭಿಸಿದೆ. ಪ್ರತಿ ವಿಭಾಗದಲ್ಲಿಯೂ ಪ್ರಶಸ್ತಿ ಪಡೆದ ಪಂಚಾಯಿತಿಗೆ ದೀನ್‌ ದಿಯಾಳ್‌ ಉಪಾಧ್ಯಾಯ ಗೌರವ ನೀಡಲಾಗಿದೆ. ಪ್ರತಿ ವಿಭಾಗದಲ್ಲಿಯೂ ರಾಜ್ಯದಲ್ಲಿ ಮೊದಲು ಮೂರು ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿತ್ತು. ಅವುಗಳಿಗೆ ರಾಜ್ಯದ ಪರಿಣಿತರ ತಂಡ ಎಲ್ಲ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ಈ ಆಯ್ಕೆ ನಡೆದಿದೆ.
ಬಡತನ ಮುಕ್ತ ಮತ್ತು ಜೀವನೋಪಾಯ ಚಟುವಟಿಕೆ ಹೆಚ್ಚಿಸಿದ ಪಂಚಾಯಿತಿ, ಆರೋಗ್ಯಕರ, ಮಕ್ಕಳ ಸ್ನೇಹಿ, ಸಾಕಷ್ಟು ಕುಡಿಯುವ ನೀರು ಒದಗಿಸಿರುವ ಸ್ವಾವಲಂಬಿ, ಶುಚಿತ್ವ ಹಾಗೂ ಹಸಿರು, ಸಾಕಷ್ಟು ಮೂಲ ಸೌಕರ್ಯ ಹೊಂದಿರುವ, ಸಾಮಾಜಿಕ ಭದ್ರತೆ ಒದಗಿಸಿರುವ, ಉತ್ತಮ ಆಡಳಿತ ಹೊಂದಿರುವ ಮತ್ತು ಮಹಿಳಾ ಸ್ನೇಹಿ ಪಂಚಾಯಿತಿ ಹೀಗೆ ಒಂಬತ್ತು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ವಿಶೇಷವೆಂದರೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾದ ಏಕೈಕ ಪಂಚಾಯಿತಿ ಇದಾಗಿದೆ. ಈ ವಿಭಾಗದಲ್ಲಿ ಆಯ್ಕೆಯಾದ ರಾಜ್ಯದ ಏಕೈಕ ಗ್ರಾ.ಪಂ. ಕೂಡ ಇದು.
ರಾಹುಲ್‌ ರತ್ನಂ ಪಾಂಡೆಯರಾಹುಲ್‌ ರತ್ನಂ ಪಾಂಡೆಯಜಿಲ್ಲಾ ಪಂಚಾಯಿತಿ ಸಿಇಒ, ಕೊಪ್ಪಳಕಿನ್ನಾಳ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ. ಈ ಪಂಚಾಯಿತಿಯ ಕೆಲಸ ಉಳಿದ ಎಲ್ಲರಿಗೂ ಮಾದರಿಯಾಗಲಿ
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ದುರುಗಪ್ಪ ಡಂಬರ ಹಾಗೂ ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ ಭಾಗಿಯಾದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *