Breaking News

ಮಂಗಳೂರು: 166 ಎಕ್ರೆ ಜಮೀನು ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಹಂಚಲು ರಾಜ್ಯ ಸರ್ಕಾರಕ್ಕೆ ಡಿಸಿ ಪತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಕೆಯಾದ166 ಎಕ್ರೆ ಡಿ.ಸಿ. ಮನ್ನಾ (ಡಿಪ್ರಸ್ಡ್ ಕ್ಲಾಸ್‌) ಜಮೀನನ್ನು ಪ. ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡುವಂತೆ ದಲಿತ ನಾಯಕರು ಆಗ್ರಹಿಸಿದ್ದು, ಈ ಬಗ್ಗೆ ಪಿಟಿಸಿಎಲ್‌ ಕಾಯ್ದೆಯಡಿ ನಿಯಮ ರೂಪಿಸಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.
ಗುರುವಾರ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ /ಪಂಗಡದ ಮುಖಂಡರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಸಂಸ ಮುಖಂಡ ದೇವದಾಸ್‌ ಎಂ. ವಿಷಯ ಪ್ರಸ್ತಾವಿಸಿ, ಅವಿಭಜಿತ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಲ್ಲೇ ಪ್ರತಿ ಗ್ರಾಮದಲ್ಲೂ ಪ.ಜಾತಿ ಮತ್ತು ಪಂಗಡದವರಿಗೆ ಭೂಮಿಯನ್ನು ಮೀಸಲಿಡಲಾಗಿತ್ತು. ಅನೇಕ ದಲಿತ ಕುಟುಂಬಗಳಿಗೆ ಇನ್ನೂ ಈ ಭೂಮಿ ಹಂಚಿಕೆಯಾಗಿಲ್ಲ. ಸಾಕಷ್ಟು ಭೂಮಿ ಒತ್ತುವರಿಯಾಗಿದ್ದು, ಅನ್ಯ ಕಾರ್ಯಕ್ಕೂ ಬಳಕೆಯಾಗಿದೆಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಈಗಾಗಲೇ ಸರಕಾರ ಮಟ್ಟದಲ್ಲೂ ಸಭೆ ನಡೆದಿದೆ. ಪ್ರತ್ಯೇಕ ನಿಯ ಮಾವಳಿಗೆ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಸರಕಾರದ ಕಾರ್ಯ ದರ್ಶಿಯವರು ಹಂಚಿಕೆಗೆ ಪತ್ರ ಬರೆದಿದ್ದಾರೆ. ಪಿಟಿಸಿಎಲ್‌ ಕಾಯ್ದೆ (ಪರಿಶಿಷ್ಟರಿಗಾಗಿ ಇರುವ ಕೆಲವು ಭೂಮಿಗಳ ವರ್ಗಾ ವಣೆ ನಿಷೇಧ ಕಾಯ್ದೆ 1978)ಯಡಿ ನಿಯಮಾವಳಿ ರೂಪಿಸಲು ಸರಕಾರಕ್ಕೆ ಪತ್ರ ಬರೆಯಲಾಗುವುದು. ಜತೆಗೆ ಅರ್ಹರ ಪಟ್ಟಿ ರೂಪಿಸಲು ತಹಶೀಲ್ದಾ ರರಿಗೆ ತಿಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 8,509 ಎಕ್ರೆ ಡಿಸಿ ಮನ್ನಾ ಭೂಮಿ ಗುರುತಿಸಿದ್ದು, 5,698 ಎಕ್ರೆಯನ್ನು ಪ. ಜಾತಿ ಹಾಗೂ ಪಂಗಡದವರಿಗೆ 625 ಎಕ್ರೆ ಇತರರಿಗೆ, 382 ಎಕ್ರೆ ಡೀಮ್ಡ್ ಫಾರೆಸ್ಟ್‌ಗಾಗಿ, 195 ಎಕ್ರೆ ಗೇರು ಅಭಿವೃದ್ಧಿಗಾಗಿ, 238 ಎಕ್ರೆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಹಾಗೂ 226 ಇತರ ಉದ್ದೇಶಕ್ಕೆ ಬಳಕೆಯಾಗಿದೆ. ಉಳಿಕೆ 1,143 ಎಕ್ರೆಯಲ್ಲಿ 977 ಅತಿಕ್ರಮ ಣವಾಗಿದ್ದು, ಈಗ 166 ಎಕ್ರೆ ಭೂಮಿ ಉಳಿದಿದೆ ಎಂದು ಡಿಸಿ ವಿವರಿಸಿದರು.
ದಲಿತ ಮುಖಂಡರಾದ ಶೇಖರ್‌ ಕುಕ್ಕೇಡಿ, ಈಶ್ವರಿ, ವಿಶ್ವನಾಥ್‌ಪ್ರೇಮ ನಾಥ್‌ ಸಹಿತ ಹಲವರು ವಿವಿಧ ಮನವಿ ಸಲ್ಲಿಸಿದರು.ಜಿ ಪಂ. ಸಿಇಒ ಡಾ. ಆನಂದ್‌, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌, ಡಿಎಫ್‌ಒ ಆಯಂಟನಿ ಮರಿಯಪ್ಪ ಮತ್ತಿತರರಿದ್ದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *