ಧಾರವಾಡ: ಯಾರೋ ಪಾಪಿಗಳು ನವಜಾತ ಗಂಡು ಶಿಶುವನ್ನು ಚರಂಡಿಯಲ್ಲಿ ಎಸೆದು ಹೋದ ಘಟನೆ ಧಾರವಾಡದಲ್ಲಿ ನಡೆದಿದೆ.
ಸದ್ಯ ಶಿಶುವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡದ ರೌನಕಪುರ ಮಸ್ಟೀದ್ ಉರ್ದು ಶಾಲೆಯ ಬಳಿ ಚರಂಡಿಯಲ್ಲಿ ಈ ಶಿಶು ಪತ್ತೆಯಾಗಿದೆ. ಈ ಶಿಶುವನ್ನು ಬಾಲಕನೋರ್ವ ಗಮನಿಸಿದ್ದಾನೆ. ಸುರಿವ ಮಳೆಯಲ್ಲಿ ಚರಂಡಿಯಲ್ಲಿ ಶಿಶು ಬಿದ್ದಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಶಹರ ಠಾಣೆ ಪೊಲೀಸರು ಆ ಶಿಶುವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





