Breaking News

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಯಳ್ಳುರ ಹೆಸರು ಕೆಡಿಸಲು ಕೆಲವೊಂದಿಷ್ಟು ಸಿಬ್ಬಂದಿಗಳಿಂದ ಯತ್ನ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಇನ್ಸೆಕ್ಟ‌ರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಅವರ ಠಾಣೆಯ ಕೆಲವೊಂದಿಷ್ಟು ಸಿಬ್ಬಂದಿ ಮುಂದಾಗಿದ್ದರು ಎಂಬ ಮಾತುಗಳು ಇದೀಗ ಕೇಳಿ ಬಂದಿದ್ದು ಇದಕ್ಕಾಗಿ ಅನಾಮಧೇಯ ಪತ್ರದ ಹೆಸರಲ್ಲಿ ಇನ್ಸೆಕ್ಟ‌ರ್ ಅವರನ್ನು ತೇಜೋವದೆ ಮಾಡಲಾಗುತ್ತಿದೆ.
ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಅವರು ಠಾಣೆಯಲ್ಲಿನ ಸಿಬ್ಬಂದಿಗಳಿಗೆ ಸರಿಯಾಗಿ ಕೆಲಸ ತೆಗೆದುಕೊಳ್ಳಲು ಪ್ರಾರಂಭ ಮಾಡಿದ ನಂತರದಲ್ಲಿ ಈ ರೀತಿಯಾದ ಬೆಳವಣಿಗೆ ಠಾಣೆಯಲ್ಲಿ ನಡೆಯುತ್ತಿದೆ.
ಕೆಲವು ಸಿಬ್ಬಂದಿ ಪದೇ ಪದೇ ರಜೆ ಬೇಕು ಅಂದಾಗ ಅಂತವರಿಗೆ ರಜೆ ಕೊಡಲು ಆಗೋದಿಲ್ಲ,ನೀವು ಸರಿಯಾಗಿ ಕೆಲ್ಸ್ ಮಾಡಬೇಕು ಇಲ್ಲವಾದ್ರೆ ನಿಮ್ಮ ಮೇಲೆ ರಿಪೋರ್ಟ್ ಹಾಕಲಾಗುವುದು ಎಂಬ ಮಾತುಗಳನ್ನು

ಇನ್ಸೆಕ್ಟ‌ರ್ ರಾದವರು ಹೇಳೇ ಹೇಳುತ್ತಾರೆ ಅದೇ ರೀತಿ ಸುರೇಶ್ ಯಳ್ಳುರ ಅವರು ಕೂಡಾ ಹೇಳಿರುತ್ತಾರೆ. ಹೀಗಾಗಿ ಇವರ ಹೆಸರನ್ನು ಕೆಡಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಇನ್ಸೆಕ್ಟರ್‌ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದೆ ಆದ್ರೆ ಹಿರಿಯ ಅಧಿಕಾರಿಗಳಾದ ಎಸಿಪಿ,ಡಿಸಿಪಿ,ಹಾಗೂ ಕಮಿಷನ‌ರ್ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಳ್ಳಬೇಕು ಅದನ್ನು ಬಿಟ್ಟು ಅನಾಮದೇಯ ಹೆಸರಿನಲ್ಲಿ ಡಿಜಿ ಯವರಿಗೆ ಪತ್ರ ಬರೆದಿದ್ದಾರೆ ಎಂಬ ಪತ್ರವನ್ನು ವೈರಲ್ ಮಾಡಿದ್ದರ ಹಿಂದಿನ ಉದ್ದೇಶವೇನು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

ಖುದ್ದು ಡಿಜಿ ಕಚೇರಿಯಿಂದ ಈ ಪತ್ರ ರವಣೆಯಾಗಿದೆಯಾ ಈ ರೀತಿಯಾಗಿ ಡಿಜಿ ಯವರಿಗೆ ನೂರಾರು ಪತ್ರ ಬರುತ್ತದೆ ಆದ್ರೆ ಅವನ್ನೆಲ್ಲ ಹೊರತುಪಡಿಸಿ ಕೇವಲ ಇನ್ಸೆಕ್ಟರ್ ಯಳ್ಳೂರ್ ಅವರ ವಿರುದ್ದ ಆರೋಪದ ಪತ್ರ ಯಾಕೆ ವೈರಲ್ ಆಗಿದೆ ಎಂಬುದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಇನ್ನು ಠಾಣೆಯಲ್ಲಿನ ಕೆಲವು ಸಿಬ್ಬಂದಿಗಳು ಇನ್ಸೆಕ್ಟ‌ರ್ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ಈ ರೀತಿಯ ತಂತ್ರವನ್ನು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ,ಈ ಪತ್ರದ ಹಿಂದೆ ಇರುವ ಖಳನಾಯಕರ ಮುಖವಾಡವನ್ನು ಶೀಘ್ರವೇ ಹಿರಿಯ ಅಧಿಕಾರಿಗಳು ಬಯಲಿಗೆ ತರಲಿದ್ದಾರೆ.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *