ಬೆಂಗಳೂರು : ರಾಜ್ಯದ 26 ಸಂಸದರಿಗೆ ಹೊಸ ಕಾರನ್ನ ಸರ್ಕಾರ ಗಿಫ್ಟ್ ನೀಡಿದೆ. ಕಳೆದ ವರ್ಷವಷ್ಟೇ ಸಂಪುಟ ಸಚಿವರುಗಳಿಗೆ 33 ಹೊಸ ಕಾರುಗಳನ್ನು ಖರೀದಿಸಿದ್ದ ರಾಜ್ಯ ಸರ್ಕಾರ, ಇದೀಗ ರಾಜ್ಯದ 26 ಸಂಸದರಿಗೂ ಹೊಸ ಹೈ ಎಂಡ್ ಕಾರುಗಳನ್ನು ಖರೀದಿ ಮಾಡಿದೆ.
ಟೊಯೋಟಾ ಕಂಪನಿಯ ಹೊಸ ಇನ್ನೊವಾ ಕ್ರಿಸ್ಟಾ ಹೈಬ್ರಿಡ್ ಕಾರುಗಳನ್ನು ರಾಜ್ಯದ ಸಂಸದರಿಗೆ ಖರೀದಿಸಲಾಗಿದೆ.
ಒಂದು ಇನ್ನೋವಾ ಹೈಬ್ರಿಡ್ ಎಸ್ಯುವಿ ಕಾರಿಗೆ ಸುಮಾರು 29 ಲಕ್ಷ ರೂ. ಖರ್ಚಾಗಿದೆ .26 ಸಂಸದರ ಕಾರುಗಳಿಗೆ ಒಟ್ಟು 7.54 ಕೋಟಿ ರೂ. ವೆಚ್ಚವಾಗಿದೆ.
ರಾಜ್ಯದ ಸಂಸದರಿಗೆ ರಾಜ್ಯ ಸರ್ಕಾರವೇ ಕಾರು ಖರೀದಿಸಿ ಕೊಡುತ್ತದೆ. ಹಳೆ ಕಾರುಗಳು ಗರಿಷ್ಠ ಮಿತಿಯಾದ 1 ಲಕ್ಷ ಕಿ.ಮೀ.ಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿ.ಮೀ. ಸಂಚಾರ ಅಥವಾ 3 ವರ್ಷ ಬಳಕೆ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳ ವಲಯದಿಂದ ಮಾಹಿತಿ ಸಿಕ್ಕಿದೆ.
ಹೊಸ ಕಾರು ಖರೀದಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ಬಳಿಕ ಹಣಕಾಸು ಇಲಾಖೆ ಹೊಸ ಕಾರು ಖರೀದಿಗೆ ಅನುಮತಿ ನೀಡಲಾಗಿದೆ . ಖರೀದಿಸಲಾದ 26 ಕಾರುಗಳ ಪೈಕಿ 21 ಸಂಸದರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನೂ 5 ಕಾರುಗಳನ್ನು ಸಂಸದರಿಗೆ ಹಸ್ತಾಂತರಿಸಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

