Breaking News

ತೊಗರಿ ಧಾರಣೆ ಎರಡು ವಾರದಲ್ಲಿ ಕ್ವಿಂಟಲ್ ಗೆ ₹1,987 ಬೆಲೆ ಕುಸಿತ: ರೈತರಲ್ಲಿ ಆತಂಕ

ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ತೊಗರಿ ಇಳುವರಿ ಉತ್ತಮವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಇದರಿಂದ ದಿಢೀರ್ ದರ ಕುಸಿದಿದ್ದು, ರೈತರು ಆತಂಕಗೊಂಡಿದ್ದಾರೆ.
ಪ್ರಸಕ್ತ ವರ್ಷ ಜಿಲ್ಲೆಯ 5.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಸುಮಾರು 50 ಲಕ್ಷ ಕ್ವಿಂಟಲ್ ಇಳುವರಿಯ ನಿರೀಕ್ಷೆ ಇದೆ.
ಈಗಾಗಲೇ, ಜಿಲ್ಲೆಯ ಎಪಿಎಂಸಿಗಳಿಗೆ 4.50 ಲಕ್ಷ ಕ್ವಿಂಟಲ್‌ ತೊಗರಿ ಆವಕವಾಗಿದೆ. ಡಿಸೆಂಬರ್ 2ರಂದು ಕ್ವಿಂಟಲ್‌ಗೆ ಗರಿಷ್ಠ ದರ ₹11,000 ಇತ್ತು. ಈಗ ₹9,013ಕ್ಕೆ (ಡಿ.18) ತಲುಪಿದೆ. ಎರಡು ವಾರದ ಅವಧಿಯಲ್ಲಿ ಕ್ವಿಂಟಲ್‌ಗೆ ₹1,987 ದರ ಕುಸಿತವಾಗಿದೆ.
ಕಳೆದ ವರ್ಷ ಕಲಬುರಗಿ ಎಪಿಎಂಸಿಗೆ 6.81 ಲಕ್ಷ ಕ್ವಿಂಟಲ್ ತೊಗರಿ ಆವಕವಾಗಿತ್ತು. ಕ್ವಿಂಟಲ್‌ಗೆ ಕನಿಷ್ಠ ₹6,550 ಮತ್ತು ಗರಿಷ್ಠ ₹13,014ಕ್ಕೆ ಮಾರಾಟವಾಗಿತ್ತು. ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿನ ಶರಣಬಸವೇಶ್ವರ ಜಾತ್ರೆಯ ಮುಹೂರ್ತ ವ್ಯಾಪಾರದಂದು ₹12,750ಕ್ಕೆ ಮಾರಾಟ ಆಗಿದ್ದು, ಈ ವರ್ಷದ ಗರಿಷ್ಠ ದರವಾಗಿದೆ. ಕನಿಷ್ಠ ದರ ₹6,512 ಆಗಿದೆ’ ಎಂದು ಕಲಬುರಗಿ ಎಪಿಎಂಸಿ ಕಾರ್ಯದರ್ಶಿ ಅಲ್ಲಾಬಕಾಷ್ ಬಿಜಾಪುರ ತಿಳಿಸಿದರು.
ಸರ್ಕಾರ ಕ್ವಿಂಟಲ್ ತೊಗರಿಗೆ ₹7,550 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹8 ಸಾವಿರದಷ್ಟು ದರ ಇತ್ತು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕ ಆಗುತ್ತಿರುವುದರಿಂದ ಸಹಜವಾಗಿ ದರ ಇಳಿದಿದೆ. ರೈತರು ಎರಡು ತಿಂಗಳು ದಾಸ್ತಾನು ಮಾಡಿಕೊಂಡು ಮಾರಿದರೆ ಎರಡರಿಂದ ಮೂರು ಸಾವಿರ ರೂಪಾಯಿಯಷ್ಟು ಹೆಚ್ಚಿನ ಲಾಭ ಪಡೆಯಬಹುದು’ ಎಂದು ಜಂಟಿ ಕೃಷಿ ನಿರ್ದೇಶಕ‌ ಸಮದ್ ಪಟೇಲ್ ಹೇಳಿದರು.
ರೈತ ಕಲಮೂಡ ಗ್ರಾಮ ತೊಗರಿಗೆ ನೆಟೆ ರೋಗ ತಗುಲಿ ನಷ್ಟವಾಗಿದೆ. ಸರ್ಕಾರವು ಖರೀದಿ ಕೇಂದ್ರ ಆರಂಭಿಸಿ ಮಾರುಕಟ್ಟೆ ಬೆಲೆಗಿಂತ ಸ್ವಲ್ಪ ಹೆಚ್ಚಿನ ದರ ನಿಗದಿಪಡಿಸಿದರೆ ಅನುಕೂಲವಾಗಲಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *