ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಆರೋಪಿಯಾದ ಮುಸಾವಿರ್ ಕೃತ್ಯದ ಬಳಿಕ ಪಶ್ಚಿಮ ಬಂಗಾಳದವರೆಗೆ ಬಸ್‌ನಲ್ಲೇ ಪ್ರಯಾಣಿಸಿದ್ದ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಬಳಿಕ ಆರೋಪಿ ಗೊರಗುಂಟೆಪಾಳ್ಯದ ಮುಖಾಂತರ ತುಮಕೂರು ತಲುಪಿದ್ದಾನೆ. ಆನಂತರ ಬಳ್ಳಾರಿಯ ಮುಖಾಂತರ ಕಲಬುರಗಿಗೆ ಪ್ರಯಾಣಿಸಿದ್ದಾನೆ. ಬಳಿಕ ಆಂಧ್ರಪ್ರದೇಶದ ನೆಲ್ಲೂರಿಗೆ ಬಸ್‌ನಲ್ಲೇ ತಲುಪಿದ್ದಾನೆ. ಇದಾದ ಬಳಿಕ ಒಡಿಶಾ ಮೂಲಕವಾಗಿ ಆತ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.ಕಳೆದ ರಾತ್ರಿ ಎನ್‌ಐಎ ಅಧಿಕಾರಿಗಳು ಕೆಫೆ ಬ್ಲಾಸ್ಟ್ ಪ್ರಕರಣದ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಅದ್ಬುಲ್ ಮಥೀನ್ ತಹಾ ಹಾಗೂ ಮುಸಾವಿರ್ ಹುಸೇನ್ ಶಾಜೆಬ್‌ನನ್ನು ಪಶ್ಚಿಮ ಬಂಗಾಳದ ಹೋಟೆಲ್ ಒಂದರಲ್ಲಿ ಬಂಧಿಸಿದ್ದಾರೆ. ಇಂದು ಆರೋಪಿಗಳನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಬಳಿಕ ಎನ್‌ಐಎ ಅಧಿಕಾರಿಗಳು ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

