Breaking News

ಸರ್ವಾಧಿಕಾರ ಬಹಳ ದಿನ ನಡೆಯಲ್ಲ, ನನಗೂ ಒಂದು ಕಾಲ ಬರುತ್ತೆ: ಸಿ.ಟಿ.ರವಿ

ಬೆಳಗಾವಿ: ನನ್ನನ್ನು ರಾತ್ರಿಯಡಿ ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ ಯಾವುದೇ ನೋಟೀಸ್ ನೀಡಿಲ್ಲ ಎಂದು ಬೆಳಗಾವಿಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಇಂದು (ಡಿ.20) ಬೆಳಗಾವಿ ಐದನೇ ಜೆಎಂಎಫ್ ಸಿ ನ್ಯಾಯಾಲಯದ ಹೊರಗಡೆ ಬರುವ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಅಕ್ರಮವಾಗಿ ಬಂಧನ ಮಾಡಿ ರಾತ್ರಿಯಿಡೀ ಮೂರು ಜಿಲ್ಲೆಗಳಲ್ಲಿ ಸುತ್ತಾಡಿಸಿ ಸರ್ವಾಧಿಕಾರಿ ಧೋರಣೆ ಮೆರೆದು ಹಲ್ಲೆ ಮಾಡಿದ್ದಾರೆ. ಎಲ್ಲದಕ್ಕೂ ಒಂದು ಪೂರ್ಣ ವಿರಾಮ ಇರುತ್ತದೆ. ಇದರಲ್ಲೂ ಪೂರ್ಣ ವಿರಾಮ ಬೀಳುತ್ತದೆ ಎಂದು ಕಿಡಿಕಾರಿದರು.
ಸರ್ವಾಧಿಕಾರ ಬಹಳ ದಿನ ನಡೆಯುವುದಿಲ್ಲ, ಪೊಲೀಸ್ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ. ನಮಗೂ ಒಂದು ಕಾಲ ಬರುತ್ತದೆ ಎಂದು ಸಿ.ಟಿ.ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *