ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ದೇವಸ್ಥಾನ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ದೇವಿಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಸ್ಥಾನದ ಟ್ರಸ್ಟ್ ಸಮಿತಿ ಸಿಇಒ ರವಿ ಕೊಟಾರಗಸ್ತಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಎಂ.ಬಿ. ವಾಲಿ ನೇತೃತ್ವದಲ್ಲಿ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲನೇ ದಿನ 38,32,029 ರೂ ಹಣ 197 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ, ಸಂಗ್ರಹವಾದ ದೇಣಿಗೆಯಾಗಿದೆ. ಮೇ ತಿಂಗಳಲ್ಲಿ ಭಕ್ತರು ಹುಂಡಿಗೆ ಹಾಕಿದ ದೇಣಿಗೆ ಎಣಿಕೆ ಕಾರ್ಯ ಎರಡನೇ ದಿನವೂ ಮುಂದುವರೆದಿದ್ದು, ಇಂದುಸಂಜೆವರೆಗೂ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





