Breaking News

ಬೆಂಗಳೂರು: ಬಿಬಿಎಂಪಿಯ ಪ್ರತಿಯೊಂದು ವಾರ್ಡ್ ನಲ್ಲಿ 52 ಹೊಸ ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ನಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಯೋಜನೆಗೆ ಚಾಲನೆ ದೊರೆತಿದ್ದು, ಏಪ್ರಿಲ್‌ ವೇಳೆಗೆ 52 ಹೊಸ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗುವ ಸಾಧ್ಯತೆ ಇದೆ.
ಗುಣಮಟ್ಟದ ಆಹಾರ ಎಲ್ಲರಿಗೂ ಸಿಗಬೇಕು, ಹಸಿದವರು ಉಪವಾಸದಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಅನ್ನು ಎಲ್ಲ ವಾರ್ಡ್‌ಗಳಲ್ಲಿ ಆರಂಭಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು.
2023ರ ಜೂನ್‌ 12ರಂದು ಅಧಿಕಾರಿಗಳ ಸಭೆ ನಡೆಸಿ, ಕೂಡಲೇ ಹೊಸ ಕ್ಯಾಂಟೀನ್‌ ಆರಂಭಿಸಬೇಕು ಹಾಗೂ ಹೊಸ ಮೆನು (ಆಹಾರಗಳು) ಪರಿಚಯಿಸಬೇಕು’ ಎಂದೂ ಸೂಚಿಸಿದ್ದರು. ಆದರೆ, ಒಂದೂವರೆ ವರ್ಷ ಈ ಸಂಬಂಧ ಯಾವುದೇ ಪ್ರಕ್ರಿಯೆ ಆಗಿರಲಿಲ್ಲ.
2024ರ ಡಿಸೆಂಬರ್‌ 17ರಂದು ಟೆಂಡರ್‌ ಪ್ರಕ್ರಿಯೆ ಆರಂಭಿಸಿರುವ ಬಿಬಿಎಂಪಿ, 17 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 52 ಇಂದಿರಾ ಕ್ಯಾಂಟೀನ್‌ಗಳನ್ನು ‘ಪ್ರೀಕಾಸ್ಟ್‌ ಮಾದರಿ’ಯಲ್ಲಿ ನಿರ್ಮಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಜನವರಿ 8ರಂದು ಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು, ಎಲ್ಲವೂ ಯೋಜನೆಯಂತೆಯೇ ನಡೆದರೆ ಜನವರಿ ಅಂತ್ಯದಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಅಲ್ಲಿಂದ ಮೂರು ತಿಂಗಳೊಳಗೆ ಕ್ಯಾಂಟೀನ್‌ ನಿರ್ಮಾಣ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಲಂಪ್‌ಸಮ್‌ ಟರ್ನ್‌ ಕೀ’ ಯೋಜನೆಯಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಗುತ್ತಿದ್ದು, ಟೆಂಡರ್‌ನಲ್ಲಿ ಅಂತಿಮವಾದ ವೆಚ್ಚಕ್ಕೇ ಕಾಮಗಾರಿ ಮುಗಿಯಬೇಕಿದೆ. 12 ತಿಂಗಳಲ್ಲಿ ಕ್ಯಾಂಟೀನ್‌ ಅನ್ನು ಗುತ್ತಿಗೆದಾರರು ಬಿಬಿಎಂಪಿಗೆ ವಹಿಸಿಕೊಡಬೇಕಿದೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *