Breaking News

ನಾಳೆ ಖಚಿತವಾಗಿ ಪೊಲೀಸರ ಸಸ್ಪೆಂಡ್…?

ಹುಬ್ಬಳ್ಳಿ:- ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡೆ ವಿವಸ್ತ್ರ ಪ್ರಕರಣ ಈಗ ತಾರಕಕ್ಕೇರಿದೆ.ಆ ಹಿನ್ನೆಲೆಯಲ್ಲಿ ಪೋಲೀಸ ಇಲಾಖೆ ಕೂಡಾ ಈಗ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದಂತಾಗಿದೆ.ನಾಳೆ ಬಿಜೆಪಿ ಕೊಟ್ಟ ಹತ್ತು ಘಂಟೆಯ ಟೈಂ ಬಾಂಡ್ ನೊಳಗಾಗಿ ಪೋಲೀಸರ ತಲೆದಂಡ ಆಗುತ್ತಾ..ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ

ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಮಹಿಳೆಯ ಪರವಾಗಿ ಹೋರಾಟಕ್ಕಿಳಿಯಲಿದೆ ಅಲ್ಲದೇ ವಿರೋಧ ಪಕ್ಷದ ನಾಯಕ ಆರ್.ಅಶೋಕ ನಾಳೆ ಹತ್ತು ಘಂಟೆಯೊಳಗೆ ಪೋಲೀಸರನ್ನ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.ಇದೆಲ್ಲದರ ಮದ್ಯೆ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ನಿನ್ನೆ ಘಟನೆ ಬಗ್ಗೆ ಬೆಳೆಗ್ಗೆ ಕೊಟ್ಟ ಹೇಳಿಕೆ ಮತ್ತು ಸಾಯಂಕಾಲ ಕೊಟ್ಟ ಹೇಳಿಕೆ ನೋಡಿದರೆ ಗೊಂದಲದಲ್ಲಿದ್ದಾರೆ ಕಮೀಷನರ್ ಅನ್ನೋ ಹಾಗಿತ್ತು.ಮಹಿಳೆಯ ವಿವಸ್ತ್ರ ಪ್ರಕರಣದಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರನ್ನೋ ಬಲಿ ಕೊಡತ್ತಾ ಪೋಲೀಸ ಇಲಾಖೆ ಅಥವಾ ನಮ್ಮ ಪೋಲೀಸರ ತಪ್ಪು ಇಲ್ಲಾ ಎಂದ ಕಮೀಷನರ್ ಅದೇ ಸ್ಟ್ಯಾಂಡ್ ತೆಗೆದುಕೊಂಡು ಪೋಲೀಸರಿಗೆ ಹೀರೋ ಆಗತಾರಾ.. ನಾಳೆವರೆಗೂ ಕಾದು ನೋಡಬೇಕಾಗಿದೆ….

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *