ಬೆಂಗಳೂರು: ಪಾರ್ಕ್‌ನಲ್ಲಿ ಕುಳಿತಿದ್ದ ವಿಚಾರಕ್ಕೆ ಯುವಕ-ಯುವತಿ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ನಡೆದ ಜಗಳದಲ್ಲಿ ಯುವತಿ ಚಾಕುವಿನಿಂದ ಗಾಯಗೊಂಡ ಘಟನೆ ದೊಮ್ಮಲೂರಿನ ಕನಕದಾಸ ಪಾರ್ಕ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೇರಳ ಮೂಲದ 22 ವರ್ಷದ ಅನಿಮಾ ಗಾಯಗೊಂಡಿದ್ದಾರೆ. ರಾತ್ರಿ 8ರ ಸುಮಾರಿಗೆ ಅನಿಮಾ ಸ್ನೇಹಿತನೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಅನಿಮಾ ಸ್ನೇಹಿತನೊಂದಿಗೆ ಮಾತಿನ ಜಗಳ ನಡೆದಿದ್ದು, ಆರೋಪಿ ಚಾಕುವಿನಿಂದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಸ್ನೇಹಿತನನ್ನು ರಕ್ಷಿಸಲು ಅನಿಮಾ ಮಧ್ಯಪ್ರವೇಶಿಸಿದಾಗ ಚಾಕು ಆಕೆಯ ತುಟಿಗೆ ತಗುಲಿ ಗಾಯವಾಗಿದೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
