ಸಿಂಧನೂರು: ಫುಟ್‍ಪಾತ್ ಅತಿಕ್ರಮಿಸಿ ನಿರ್ಮಿಸಿದ್ದ ಶೆಡ್ ಮತ್ತು ಡಬ್ಬಾ ಅಂಗಡಿಗಳನ್ನು ನಗರದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಬೆಳಗಿನಿಂದ ಸಂಜೆವರೆಗೆ ಸ್ವಯಂಪ್ರೇರಣೆಯಿಂದ ತೆರವು ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಅಘೋಷಿತ ನಿಷೇದಾಜ್ಞೆ ಜಾರಿಯಾದಂತೆ ಕಂಡುಬಂತು.
ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲ್‍ಶೆಟ್ಟಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸೇರಿದಂತೆ ಡಿವೈಎಸ್‍ಪಿ, ನಗರಸಭೆ ಪೌರಾಯುಕ್ತ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತಿತರ ಅಧಿಕಾರಿಗಳು ಬುಧವಾರ ಸಂಜೆ ಸುಮಾರು 500ಕ್ಕೂ ಅಧಿಕ ಪೊಲೀಸರ ಪಥಸಂಚಲನ ನಡೆಸುವ ಮೂಲಕ ಅತಿಕ್ರಮಿತ ಅಂಗಡಿಕಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
6 ಡಿಆರ್‌ಪಿ, 8 ಪೊಲೀಸ್ ವಾಹನಗಳು ನಿರಂತರವಾಗಿ ಸೈರನ್ ಹಾಕಿಕೊಂಡು ಮಹಾತ್ಮಗಾಂಧಿ ವೃತ್ತದ ಮೂಲಕ ಗಂಗಾವತಿ ರಸ್ತೆ, ಕುಷ್ಟಗಿ ರಸ್ತೆ, ಹಳೆಬಜಾರ್, ರಾಯಚೂರು ರಸ್ತೆಗಳಲ್ಲಿ ಸಂಚರಿಸಿದರು. ಪೊಲೀಸರ ಪಥ ಸಂಚಲನ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

