Breaking News

ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಬೆಂಗಳೂರು: ಹವ್ಯಕ ಸಮಾಜದವರ ಮೂಲ ಕೃಷಿಯಾದ ಅಡಕೆ ಉತ್ಪನ್ನದ ಕುರಿತು ಯಾವುದೇ ರೀತಿಯ ವಿರೋಧಾ ಭಿಪ್ರಾಯಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ, ಅಡಕೆ ಬೆಳೆ ಪರವಾಗಿ ರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.
ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 3 ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಅಡಕೆ ಹವ್ಯಕ ಸಮುದಾಯದ ಮೂಲ ಕೃಷಿ. ಮದುವೆಯಿಂದ ಶ್ರಾದ್ಧದವರೆಗೆ ಅಡಕೆ ಅತ್ಯಗತ್ಯ. ಆದರೆ, ಅಡಕೆ ಕುರಿತು ಅನೇಕ ರೀತಿಯ ವರದಿಗಳು ಬಂದಿವೆ. ಎಷ್ಟೇ ವರದಿ ಗಳು ಬಂದರೂ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ. ಏನೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿರಲಿದೆ ಎಂದು ತಿಳಿಸಿದರು.
ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ಗುಣಗಳಿವೆ. ಆದರೆ, ಅದೆಲ್ಲವನ್ನೂ ಮೀರಿ ಹವ್ಯಕ ಸೇರಿ ಬ್ರಾಹ್ಮಣ ಸಮುದಾಯ ಸಮಾಜವನ್ನು ಒಗ್ಗೂಡಿಸಿ ಸಾಗುವ ಕೆಲಸ ಮಾಡುತ್ತಿದೆ. ರಾಮಾಯಣದಲ್ಲಿ ರಾಮ ನಾಯಕನಾಗಿದ್ದರೆ, ವಾಲ್ಮೀಕಿ ಅದನ್ನು ರಚಿಸಿದ. ಅವರಿಬ್ಬರೂ ಬ್ರಾಹ್ಮಣ ಸಮುದಾ ಯಕ್ಕೆ ಸೇರಿದವರಲ್ಲ. ಆದರೆ, ಬ್ರಾಹ್ಮಣನಾದ ರಾವಣ ಖಳನಾಯಕನಾಗಿದ್ದಾನೆ. ಹೀಗಾಗಿ ರಾಮನನ್ನು ನಾವು ಪೂಜಿಸುತ್ತೇವೆ. ಸಮಾಜ ದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಬ್ರಾಹ್ಮಣ ಸಮುದಾಯ ಮಹತ್ವದ ಪಾತ್ರವಹಿಸುತ್ತಿದೆ ಎಂದು ಹೇಳಿದರು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *