Breaking News

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಎರಡು ದೇಹಗಳು ಛಿದ್ರ ಛಿದ್ರ

ಹುಬ್ಬಳ್ಳಿ:ಸಾವಿನ ಹೆದ್ದಾರಿಗೆ ಮತ್ತೆರಡು ಜೀವಗಳು ಬಲಿಯಾಗಿವೆ.ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ದೇಹಗಳು ಛಿದ್ರ ಛಿದ್ರವಾದ ಘಟನೆ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಹೊರವಲಯದಲ್ಲಿರುವ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನದ ಬಳಿಯ ಬೈಪಾಸ್‌ನಲ್ಲಿ ನಡೆದ ಅವಘಡದಲ್ಲಿ ಮೃತ ಇಬ್ಬರೂ ವ್ಯಕ್ತಿಗಳ ಗುರುತು ಪತ್ತೆಯಾಗದ ರೀತಿಯಲ್ಲಿ ಛಿದ್ರವಾಗಿ ಬಿದ್ದಿವೆ. ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಾವಿನ ರಸ್ತೆಗೆ ಇನ್ನೆಷ್ಟು ಬಲಿ ಬೇಕೆಂದು ಪ್ರಶ್ನೆ ಮಾಡುತ್ತಿರುವ ಹುಬ್ಬಳ್ಳಿ-ಧಾರವಾಡ ಜನರು, ಪ್ರತಿದಿನವೂ ಕೈಯಲ್ಲಿ ಜೀವನ ಹಿಡಿದು ಸಂಚಾರ ಮಾಡುವಂತಾಗಿದೆ. 1,400 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ, ಕಾಮಗಾರಿಗೆ ಚಾಲನೆ ಸಿಕ್ಕು ಮೂರು ವರ್ಷ ಕಳೆದ್ರೂ ಇನ್ನೂ ಸಿಕ್ಕಿಲ್ಲ ಜನರಿಗೆ ಉಪಯೋಗ. ಇದೇ ಕಾರಣಕ್ಕಾಗಿ ದಿನನಿತ್ಯ ಬಲಿ ಪಡೆದುಕೊಳ್ಳುತ್ತಿದೆ ರಾಷ್ಟ್ರೀಯ ಹೆದ್ದಾರಿ.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *