Breaking News

ಫೆ.28 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ಸರ್ಕಾರ ಸಮ್ಮತಿ

ಹೊಸಪೇಟೆ: ಈ ಬಾರಿಯ ಹಂಪಿ ಉತ್ಸವವನ್ನು ಫೆಬ್ರುವರಿ 28ರಿಂದ ಮೂರು ದಿನಗಳ ಕಾಲ ನಡೆಸಲು ಸರ್ಕಾರ ಸಮ್ಮತಿ ಸೂಚಿಸಿದ್ದು, ಒಂದು ತಿಂಗಳು ವಿಳಂಬವಾಗಿ, ಬಿರು ಬೇಸಿಗೆಯಲ್ಲಿ ಉತ್ಸವ ನಡೆಸುವುದು ಇದೀಗ ಅನಿವಾರ್ಯವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಸಿ.ಎಂ ಸಮ್ಮತಿಯ ಮೇರೆಗೆ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಈ ಬಾರಿಯೂ ಅದ್ಧೂರಿ ಹಾಗೂ ಸಂಪ್ರದಾಯವಾಗಿ ಹಂಪಿ ಉತ್ಸವ ಆಚರಿಸಲಾಗುವುದು. ಉತ್ಸವದ ಸಿದ್ಧತೆ ಮಾಡಿಕೊಳ್ಳವಂತೆ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಫೆಬ್ರುವರಿ ತಿಂಗಳ ಮೊದಲ ಮೂರು ವಾರ ಮುಖ್ಯಮಂತ್ರಿ ಅವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳು ಇರುವ ಕಾರಣ ಈ ಈ ಬಾರಿ ಫೆಬ್ರುವರಿ ಅಂತ್ಯಕ್ಕೆ ಉತ್ಸವದ ದಿನಾಂಕ ನಿಗದಿಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಎಂ.ಪಿ.ಪ್ರಕಾಶ್‌ ಅವರು ಹಂಪಿ ಉತ್ಸವಕ್ಕೆ ನಾಂದಿ ಹಾಡಿದಾಗ ನವೆಂಬರ್‌ನಲ್ಲೇ ಅದು ನಡೆಯುತ್ತಿತ್ತು. ಆದರೆ 2010ರಲ್ಲಿ ಜನಾರ್ದನ ರೆಡ್ಡಿ ಅವರು ಸಚಿವರಾಗಿದ್ದ ಸಂದರ್ಭ ನವೆಂಬರ್ ಬದಲಿಗೆ ಜನವರಿಗೆ ಉತ್ಸವದ ದಿನಾಂಕ ಮುಂದೂಡಲಾಯಿತು, ಬರಬರುತ್ತ ಅದು ಫೆಬ್ರುವರಿಗೆ ಬಂದು ತಲುಪಿದೆ.
ಸಮಸ್ಯೆ ಆಗದು: ‘ಕಳೆದ ವರ್ಷ ಫೆಬ್ರುವರಿ 2ರಿಂದ 4ರವರೆಗೆ ಹಂಪಿ ಉತ್ಸವ ನಡೆದಿತ್ತು. ಈ ವರ್ಷ ಬಹುತೇಕ ಒಂದು ತಿಂಗಳು ವಿಳಂಬವಾಗಿ ಉತ್ಸವ ನಡೆಯುತ್ತಿದೆ, ಮಾರ್ಚ್‌ ತಿಂಗಳು ಬಿರು ಬೇಸಿಗೆಯ ಸಮಯ ಆಗಿದ್ದರೂ ಕಾರ್ಯಕ್ರಮಗಳು ನಡೆಯುವುದು ಸಂಜೆ ಹೊತ್ತಲ್ಲಿ, ಹೀಗಾಗಿ ಯಾವುದೇ ಸಮಸ್ಯೆ ಆಗದು, ಇದೀಗ ಜನವರಿ ಆರಂಭದಲ್ಲೂ ಚಳಿ ಇರುವ ಕಾರಣ ಫೆಬ್ರುವರಿ ಅಂತ್ಯದ ವೇಳೆಗೆ ಬಿಸಿಲಿನ ತಾಪ ತೀವ್ರಗತಿಯಲ್ಲಿ ಹೆಚ್ಚಾಗಲಾರದು ಎಂಬ ವಿಶ್ವಾಸ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಎಂ.ದಿವಾಕರ್ ತಿಳಿಸಿದರು.
ಕಳೆದ ವರ್ಷ ತೀವ್ರ ಬರಗಾಲದಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇತ್ತು. ಫೆಬ್ರುವರಿ ಸಮಯದಲ್ಲಿ 10 ಟಿಎಂಸಿ ಅಡಿಗಿಂತಲೂ ಕಡಿಮೆ ನೀರಿತ್ತು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯದಲ್ಲಿ 80 ಟಿಎಂಸಿ ಅಡಿಗಿಂತ ಅಧಿಕ ನೀರು ಈಗ ಇದ್ದು, ಮಾರ್ಚ್‌ ಆರಂಭದ ವೇಳೆಗೆ ಸಹ ಸಾಕಷ್ಟು ನೀರಿನ ಸಂಗ್ರಹ ಇರಲಿದೆ. ಹೀಗಾಗಿ ನದಿಯಲ್ಲಿ ನೀರಿನ ಕೊರತೆ ಉಂಟಾದರೆ ಅಣೆಕಟ್ಟೆಯಿಂದ ನೀರು ಹರಿಸಿ ಉತ್ಸವಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬಹುದಾಗಿದೆ’
ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿಕಳೆದ ವರ್ಷ 5 ಲಕ್ಷಕ್ಕಿಂತಲೂ ಅಧಿಕ ಮಂದಿ ಉತ್ಸವಕ್ಕೆ ಬಂದಿದ್ದರು. ಈ ಬಾರಿ ಸಹ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಈಗಿನಿಂದಲೇ ಸಿದ್ಧತೆ ಮಾಡಲಿದ್ದೇವೆ.

Share News

About BigTv News

Check Also

ಶಾಸಕ ಸುನಿಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಕಾಂಗ್ರೆಸ್ ಕಾರ್ಯಕರ್ತ ವಶಕ್ಕೆ

ಉಡುಪಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ …

Leave a Reply

Your email address will not be published. Required fields are marked *