ಕೋಲಾರ: ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಬಳಿ ಪತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು ಹತ್ಯೆ ಮಾಡಿ, ಮೃತದೇಹವನ್ನು ನೀರಿನ ಸಂಪ್‌ಗೆ ಎಸೆದಿರುವ ಘಟನೆ ನಡೆದಿದೆ. ಸೊಣ್ಣೇನಹಳ್ಳಿ ಮೂಲದ ವೆಂಕಟೇಶ್ (36) ಕೊಲೆಯಾದ ವ್ಯಕ್ತಿ. ವೆಂಕಟೇಶ್ ಹಾಗೂ ಸುರೇಶ್ ಎಂಬಾತನ ಪತ್ನಿ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸುರೇಶ್, ಸ್ನೇಹಿತ ಸಂತೋಷ್ ಜೊತೆ ಸೇರಿ ವೆಂಕಟೇಶ್‌ನನ್ನು ಎಣ್ಣೆ ಪಾರ್ಟಿಗೆ ಕರೆಸಿ, ಮದ್ಯ ಸೇವನೆಯ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ನೀರಿನ ಸಂಪ್‌ಗೆ ಹಾಕಿ ಮುಚ್ಚಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

