ಧಾರವಾಡದ : ನೀವೆ ದೇವರು ಅಂತ ದೂರು ಕೊಟ್ಟರೆ ಪರಿಹಾರ ಕೊಡಿಸಬೇಕಾದ ಪೊಲೀಸರೇ ಸುಮ್ಮನಾಗಿದ್ದಾರೆ, ದುಡಿಯಲು ಲಾರಿ ತೆಗೆದುಕೊಂಡವನು ನಂಬಿಂದವರಿದಲೇ ಮೋಸಕ್ಕೊಳಗಾಗಿ ಪೊಲೀಸರ ಬಳಿಗೆ ಹೋದವನಿಗೆ ಸಿಕ್ಕಿದ್ದೇನು..!?
ಹೌದು ದುಡಿಯೋಕೆ ಅಂತಾ ಗಾಡಿ ಖರೀದಿಸಿ ಅದನ್ನು ಬೇರೆಯವನ ಹತ್ತಿರ ದುಡಿಸೊಕೆ ಬಿಟ್ಟಿದ್ದ ಆದ್ರೆ ಆತ ಅದನ್ನು ಕೆಲದಿನಗಳ ಕಾಲ ದುಡಿಸಿ ನಂತರ ಅದನ್ನು ಸ್ಕ್ರ್ಯಾಪ್ ಮಾಡಿ ಬಿಡಿ ಭಾಗಗಳನ್ನು ಮಾರಾಟ ಮಾಡಿ,ಗಾಡಿ ಕಳ್ಳತನವಾಗಿದೆ ಅಂತಾ ಸುಳ್ಳಿ ಹೇಳಿದ್ದಾನೆ.

ನಂತರ ಈ ಕುರಿತು ಧಾರವಾಡದ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ನೀಡ್ತಾನೆ,ದೂರು ದಾಖಲಿಸಿಕೊಂಡು ಅಪರಾಧಿಗಳನ್ನು ಚಿಟಿಂಗ್ ಕೇಸ್ನಲ್ಲಿ ಅರೆಸ್ಟ್ ಮಾಡುವುದಾಗಿ ಹೇಳ್ತಾರೆ. ಪೋಲಿಸರು ಗಾಡಿ ಡ್ರೈವರನನ್ನು ಕರೆಸಿ ಮಾಹಿತಿ ಕಲೆಹಾಕಿ ಆತನಿಂದ ಸಾಹೆಬ್ರಿಗೆ ಅಂತ ಹೇಳಿ 1.50 ಲಕ್ಷರೂ ವಸೂಲಿ ಮಾಡಿ ಆತನನ್ನು ಬಿಟ್ಟು ಕಳಸ್ತಾರೆ.ನಂತರ ಗಾಡಿ ಭಾಗಗಳನ್ನು ತೆಗೆದುಕೊಂಡ ಮಿಸ್ತ್ರಿಗಳಿಂದ ಒಟ್ಟು 3.50 ಲಕ್ಷೂ ಸೇರಿ ಒಟ್ಟು ನಾಲ್ಕು ಲಕ್ಷರೂಗಳನ್ನು ಹಣ ಪಡೆದು ಸುಮ್ಮನಾಗಿದ್ದಾರೆ.ಆದ್ರ ದೂರು ದಾಖಲಿಸಿಕೊಂಡು ಅಪರಾಧಿಗಳ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗಾಡಿ ಮಾಲಿಕ ಫಕ್ರುದ್ದಿನ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಪೋಲಿಸರು ಸ್ಕ್ರ್ಯಾಪನಲ್ಲಿ ಕೂಡ ಹಣದ ವಸೂಲಿಗೆ ಮುಂದಾಗಿದ್ದಾರೆ.ಒಟ್ನಲ್ಲಿ ನಂಬಿದವರಿಂದಲೇ ಮೋಸಕ್ಕೊಳಗಾದವನಿಗೆ ಇತ್ತ ಗಾಡಿಯೂ ಇಲ್ಲ ಹಣವೂ ಇಲ್ಲದಂತಾಗಿ ದಿಕ್ಕೆ ತೋಚದಂತಾಗಿದೆ.ಇದೀಗ ಗಾಡಿ ವಾಪಸ್ ಕೊಡಿಸುವಂತೆ ಗಾಡಿ ಮಾಲಿಕ ಮಾದ್ಯಮದೆದುರು ಕಣ್ಣಿರು ಹಾಕ್ತಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

