ಔರಾದ್: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಬೀದರ್-ಕಮಲನಗರ ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿದರು.
ಕಮಲನಗರ, ಡಿಗ್ಗಿ, ಸಂಗಮ ಬಳಿ ರಸ್ತೆ ವೀಕ್ಷಿಸಿದ ಸಚಿವರು ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದ ಕುರಿತು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೆತ್ತನೆ ಹಾಗೂ ಕಪ್ಪು ಮಣ್ಣು ಇರುವುದರಿಂದ ರಸ್ತೆಯಲ್ಲಿ ಬಿರುಕು ಬಿಡುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಲು ಯತ್ನಿಸಿದರು.
ಇದಕ್ಕೆ ಆಕ್ಷೇಪಿಸಿದ ಶಾಸಕ ಪ್ರಭು ಚವಾಣ್ ಇವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದು ರಸ್ತೆ ಪೂರ್ಣ ಕಳಪೆಯಾಗಿದೆ. ಅಧಿಕಾರಿಗಳು ಗುತ್ತಿಗೆದಾರರು ಸೇರಿ ಈ ರಸ್ತೆ ಹಾಳು ಮಾಡಿದ್ದಾರೆ. ಇದು ದುರಸ್ತಿ ಮಾಡಿದರೂ ರಿಪೇರಿ ಆಗುವುದಿಲ್ಲ. ಹೀಗಾಗಿ ಇದು ಮತ್ತೆ ಹೊಸದಾಗಿ ಡಾಂಬರ್ ರಸ್ತೆ ಮಾಡಬೇಕಾಗುತ್ತದೆ ಎಂದರು.
ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.
ಬೀದರ್-ಕಮಲನಗರ ನಡುವಿನ ಹೆದ್ದಾರಿ ಕಾಮಗಾರಿ ಸರಿ ಆಗಿಲ್ಲ. ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ತಾವು ಬಂದು ನೋಡಿ’ ಎಂದು ಶಾಸಕ ಪ್ರಭು ಚವಾಣ್ ಅವರು ಈಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿಕೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

