Breaking News

2024-25ನೇ ಆರ್ಥಿಕ ವರ್ಷದಲ್ಲಿ ಹಟ್ಟಿ ಚಿನ್ನದ ಕಂಪನಿಗೆ ₹239 ಕೋಟಿ ಲಾಭ: ಜಿ.ಟಿ.ಪಾಟೀಲ್

ಹಟ್ಟಿ ಚಿನ್ನದ ಗಣಿ: 2024-25ನೇ ಆರ್ಥಿಕ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಂಪನಿಯು ₹239 ಕೋಟಿ ಲಾಭ ಗಳಿಸಿದೆ. ಇದರಲ್ಲಿ ಶೇ 30ರಷ್ಟನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡಿದ್ದೇವೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಜಿ.ಟಿ.ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ಆರ್ಥಿಕ ಸಾಲಿನಲ್ಲಿ 1,800 ಕೆ.ಜಿ ಚಿನ್ನ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಡಿಸೆಂಬರ್‌ವರೆಗೂ 1,700 ಕೆ.ಜಿ. ಉತ್ಪಾದನೆ ಮಾಡಲಾಗಿದೆ. ಜನವರಿ ಕೊನೆಯಲ್ಲಿ ಗುರಿ ತಲುಪಲಿದ್ದೇವೆ’ ಎಂದರು.
ಕಾರ್ಮಿಕರಿಗೆ ಕೊಟ್ಟ ಮಾತಿನಂತೆ ಹೊಸ ವೇತನ ಒಪ್ಪಂದ ಜಾರಿ ಮಾಡಿದ್ದೇವೆ’ ಎಂದು ಹೇಳಿದರು. ಕಂಪನಿಯ ಪ್ರತಿ ಕಾರ್ಮಿಕನಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. ಮೃತಪಟ್ಟರೆ ₹1 ಕೋಟಿ ಮತ್ತು ಅಂಗವಿಕಲತೆಗೆ ತುತ್ತಾದರೆ ₹80 ಲಕ್ಷ ಸಿಗಲಿದೆ. ಕಾರ್ಮಿಕರು ಎಸ್‌ಬಿಐನಲ್ಲಿ ಖಾತೆ ತೆರೆಯಬೇಕು ಎಂದರು.
₹998 ಕೋಟಿ ವೆಚ್ಚದಲ್ಲಿ ಗಣಿ ಕಂಪನಿ ಕಾಲೊನಿಯಲ್ಲಿ ರಸ್ತೆ, ಆಸ್ಪತ್ರೆ, ಕ್ರೀಡಾಂಗಣ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಒಂದು ಸಾವಿರ ಕಾರ್ಮಿಕರಿಗೆ ವಾಸಿಸಲು ಮೂರು ಮಹಡಿಯ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ’ ಎಂದು ಹೇಳಿದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *