Breaking News

ಗಂಗಾವತಿ-ಕಂಪ್ಲಿ-ದರೋಜಿ ರೈಲ್ವೆ ಲೈನ್ ಕಾಮಗಾರಿ ಆರಂಭಿಸಲು ಕೇಂದ್ರ ಸಚಿವ ಸೋಮಣ್ಣರಿಗೆ ಮನವಿ

ಕಂಪ್ಲಿ: ತಾಲ್ಲೂಕು ರೈಲ್ವೆ ಮಾರ್ಗ ಕ್ರಿಯಾ ಸಮಿತಿಯವರು ಗಂಗಾವತಿ-ಕಂಪ್ಲಿ-ದರೋಜಿ ರೈಲ್ವೆ ಲೈನ್ ಕಾಮಗಾರಿ ಆರಂಭಕ್ಕೆ ಆಗ್ರಹಿಸಿ ಮಂಗಳವಾರ ಕೊಪ್ಪಳದಲ್ಲಿ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಈಗಾಗಲೇ ಗಂಗಾವತಿ-ಕಂಪ್ಲಿ-ದರೋಜಿ ರೈಲ್ವೆ ಲೈನ್ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. 31.30ಕಿ.ಮೀ ಕಾಮಗಾರಿಗೆ ರೂ. 919.49ಕೋಟಿ ನಿಗದಿಪಡಿಸಿದೆ. ಕಾಮಗಾರಿ ಆರಂಭಕ್ಕೆ ಕೂಡಲೇ ಹಣ ಮಂಜೂರು ಮಾಡಬೇಕು. ಈ ವರ್ಷದ ಬಜೆಟ್‍ನಲ್ಲಿಯಾದರು ಅನುದಾನ ಮೀಸಲಿರಿಸುವಲ್ಲಿ ತಾವು ಮುತುವರ್ಜಿವಹಿಸಬೇಕು. ರಾಜ್ಯ ಸರ್ಕಾರದ ಅನುದಾನಕ್ಕಾಗಿ ಸ್ಥಳೀಯ ಶಾಸಕರನ್ನು, ಬಳ್ಳಾರಿ ಸಂಸದರನ್ನು ಒತ್ತಾಯಿಸಲಾಗುವುದು. ಶತಾಯಗತಾಯ 2025ರಲ್ಲಿಯೇ ರೈಲ್ವೆ ಲೈನ್ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಪದಾಧಿಕಾರಿಗಳಾದ ನಾರಾಯಣ ಇಂಗಳಗಿ, ಹಾದಿಮನಿ ಕಾಳಿಂಗವರ್ಧನ, ಗಂಗಾವತಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರು ಹಾಜರಿದ್ದರು.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *