ಕಲಬುರಗಿ: ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯತ್ತಮ ಚುನಾವಣಾ ಪದ್ದತಿ ಅಳವಡಿಸಿಕೊಂಡು ಅನುಷ್ಟಾನಕ್ಕೆ ತಂದಿದ್ದಕ್ಕಾಗಿ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿದ್ದು, ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಿದೆ.
ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಭಾರತ ಚುನಾವಣಾ ಆಯೋಗವು ಇದೇ ಜನವರಿ 25 ರಂದು ನವದೆಹಲಿಯ ದೆಹಲಿ ಕಂಟೋನ್ಮೆಂಟ್ ಪ್ರದೇಶದ ಮಾಣಿಕಶಾ ಸೆಂಟರ್ ನಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕರು ಅಗಮಿಸಲು ಅಧಿಕೃತ ಆಹ್ವಾನ ನೀಡುವಂತೆ ತಿಳಿಸಿದೆ.
ಜನರಲ್ ಕೆಟಗರಿಯಲ್ಲಿ 11, ಸ್ಪೆಷಲ್ ಕೆಟಗರಿಯಲ್ಲಿ 3, ಅತ್ಯುತ್ತಮ ನಿರ್ವಹಣೆಗೆ 3 ರಾಜ್ಯದ ಸಿ.ಇ.ಒ ಗಳಿಗೆ ಹಾಗೂ ಅತ್ಯುತ್ತಮ ಇಲಾಖೆಗಳ ಭಾಗದಲ್ಲಿ ಕೇಂದ್ರದ ಎನ್.ಐ.ಸಿ, ರೈಲ್ವೆ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಇ.ಸಿ.ಐ ಪ್ರಶಸ್ತಿ ಘೋಷಿಸಿದೆ.
ಇನ್ನು ಜನರಲ್ ಕೆಟಗರಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿರುವ 9 ಜನ ಜಿಲ್ಲಾ ಚುನಾವಣಾಧಿಕಾರಿಗೆ ಮತ್ತು ಇಬ್ಬರು ಐ.ಪಿ.ಎಸ್. ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಕಲಬುರಗಿ ಡಿ.ಸಿ. ಬಿ.ಫೌಝಿಯಾ ತರನ್ನುಮ್ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಏಕೈಕ ಅಧಿಕಾರಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

