ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಯಲು ಬಸವಣ್ಣ ದೇವರ ದೇವಸ್ಥಾನದ ಬಳಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಎಸೆದಿದ್ದ ಆರೋಪಿಗಳನ್ನು ಲಕ್ಷೇಶ್ವರದ ಪೊಲೀಸರು ಪತ್ತೆ ಹಚ್ಚಿ, ಘಟನೆಯಲ್ಲಿ ಆರೋಪಿಗಳು ಬಳಸಿದ್ದ ಕಾರು ಹಾಗೂ ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳ ಪತ್ತೆ ಕಾರ್ಯಕ್ಕಿಳಿದ ಪೊಲೀಸರು ಸುನೀಲ್ ಅಶೋಕ ಮಲ್ಲಾರಿ. ಸಿದ್ದಪ್ಪ ನಾಗಪ್ಪ ಕುಬಸದ, ನಟರಾಜ ಈರಪ್ಪ ನಿರಲಗಿ ಹಾಗೂ ರಮೇಶ ಉರ್ಫ್ ಮುತ್ತುರಾಜ ದೇವಪ್ಪ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಲಕ್ಷೇಶ್ವರ ಪೊಲೀಸರನ್ನು ಅಭಿನಂದಿಸಿ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಎಸ್‌ಪಿ ಬಿ.ಎಸ್. ನೇಮಗೌಡ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

