Breaking News

ಜಾತಿಗಣತಿ ಮಾಡಿದ ನಂತರವೇ ಒಳ ಮೀಸಲಾತಿ ಜಾರಿಗೆ ತರಬೇಕು: ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಒತ್ತಾಯ

ಬೀದರ್ : ಜಾತಿ ಜನಗಣತಿ ಮಾಡಿದ ನಂತರವೇ ಒಳಮಿಸಲಾತಿ ಜಾರಿಗೆ ತರಬೇಕು ಎಂದು ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯು ಒತ್ತಾಯ ಮಾಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋರ್ ಸೇನಾ ಮಹಿಳಾ ಅಧ್ಯಕ್ಷ ಸವಿತಾ ರಾಠೋಡ್ ಅವರು, ಜಾತಿ ಜನಗಣತಿಯು 2011ರ ನಂತರ ನಡೆದಿಲ್ಲ.
2011ರಲ್ಲಿಯೂ ನಮ್ಮ ಸಮುದಾಯದ ಜನಗಣತಿ ಸರಿಯಾಗಿ ನಡೆದಿಲ್ಲ. ಹಾಗಾಗಿ ನಮ್ಮ ಜನಸಂಖ್ಯೆ ಹೆಚ್ಚಾಗಿದ್ದು, ಒಳಮಿಸಲಾತಿಯಲ್ಲಿ ನಮ್ಮ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಒದಗಿಸುತ್ತಿಲ್ಲ. ನಾಗಮೋಹನ್ ದಾಸ್ ಅವರಿಗೆ ಭೇಟಿಯಾಗಿ ಇದರ ಬಗ್ಗೆ ಮನವಿಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಗೋವರ್ಧನ್ ರಾಠೋಡ್ ಮಾತನಾಡಿ, ಈಗ ಒಳಮೀಸಲಾತಿ ಜಾರಿಗೆ ಮಾಡಿದರೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹಾಗಾಗಿ ಒಳಮೀಸಲಾತಿ ಜಾರಿಗೆ ತರುವ ಮುನ್ನ ನಮ್ಮ ಸಮುದಾಯದ ಜಾತಿ ಜನಗಣತಿ ಆಗಬೇಕು. ಜಾತಿ ಜನಗಣತಿ ನಡೆದಾಗ ಮಾತ್ರ ನಮ್ಮ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಸಿಗುತ್ತದೆ. ಒಂದು ವೇಳೆ ಜಾತಿ ಜನಗಣತಿ ನಡೆಸದೆ ಒಳಮೀಸಲಾತಿ ಜಾರಿ ಮಾಡಿದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೋರ್ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ್ ಜಾಧವ್, ಉಪಾಧ್ಯಕ್ಷ ನೀಲಕಂಠ ರಾಠೋಡ್, ಕಾರ್ಯಧ್ಯಕ್ಷ ಬಾಬು ಜಾಧವ್ ಹಾಗೂ ಶಶಿಕಲಾ ವಸಂತ್ ಭಾಗವಹಿಸಿದ್ದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *