ಹುಬ್ಬಳ್ಳಿ: ಈರುಳ್ಳಿ, ಬೆಳ್ಳುಳ್ಳಿ ಪ್ರತಿ ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಮಸಾಲೆ ಸಾಮಾಗ್ರಿಯಾಗಿದೆ. ಇವು ಅಡುಗೆಗೆ ಅತೀ ಅವಶ್ಯಕ ಪದಾರ್ಥಗಳಾಗಿವೆ. ಆದರೆ ಟೊಮೆಟೋ ಬೆಲೆ ಏರಿಕೆ ಬಳಿಕ ಈಗ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳುಳ್ಳಿ ಬೆಲೆ ಕೇಳಿದರೆ ದಾಂಗಾಗುವುದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಜವಾರಿ ಮತ್ತು ಹೈಬ್ರೀಡ್ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಬೆಳ್ಳುಳ್ಳಿಗೆ 80-ರಿಂದ 90 ರೂಪಾಯಿ ಮೊದಲಿತ್ತು. ಇದೀಗ ಬೆಳ್ಳುಳ್ಳಿ ದರ ಇದೀಗ ಪ್ರತಿ ಕೆ.ಜಿಗೆ 300 ರಿಂದ 450 ರೂಪಾಯಿಗೆ ಏರಿಕೆ ಆಗಿದೆ. ಮಳೆಯಾಗದ ಹಿನ್ನಲೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತತ್ತರಿಸಿದ್ದಾರೆ.
ಸಗಟು ಮಾರುಕಟ್ಟೆಗೆ ಈಗ ಬೆಳ್ಳುಳ್ಳಿ ಪೂರೈಕೆ ಕಡಿಮೆ ಆಗುತ್ತಿದೆ. ಈ ಹಿಂದೆ ದಿನಕ್ಕೆ 25ರಿಂದ 30 ವಾಹನಗಳಲ್ಲಿ ನೂರಾರು ಚೀಲಗಳಲ್ಲಿ ಬೆಳ್ಳುಳ್ಳಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ ಇನ್ನು ದಕ್ಷಿಣ ರಾಜ್ಯಗಳಿಂದ ಕೂಡ ಬೆಳ್ಳುಳ್ಳಿ ಪೂರೈಕೆ ತಗ್ಗಿದೆ. ಇದು ಕೂಡ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಇನ್ನು ಊಟಿ ಹಾಗೂ ಮಲಪುರಂನಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕೂಡ ಭಾರೀ ಇಳಿಕೆಯಾಗಿದೆ. ಇದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





