ಮನೆಯ ಸುತ್ತಲೂ ಬಳಸುವ ಅನೇಕ ವಸ್ತುಗಳು ಚಿಕ್ಕ ಮಕ್ಕಳಿಗೆ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಒಳಿತು.ಟೂತ್ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಆತಂಕಕಾರಿ ಘಟನೆ ಕೇರಳದ ಪಾಲಕ್ಕಾಡ್ ನ ಅಗಳಿಯಲ್ಲಿ ನಡೆದಿದೆ.ಕೂಡಲೇ ಬಾಲಕಿಯನ್ನು ಪೋಷಕರು ಕೊಟ್ಟತ್ತರ ಬುಡಕಟ್ಟು ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಬಳಿಕ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕೊಟ್ಟಾಯಂ ವೈದ್ಯಕೀಯ ಕಾಲೇಜು ಮತ್ತು ತಿರುವನಂತಪುರಂ ಶ್ರೀ ಚಿತ್ರಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯ ಹೊರತಾಗಿಯೂ, ನೇಹಾ ರೋಸ್ ವಿಷಕ್ಕೆ ಬಲಿಯಾದಳು.
bigtvnews | Hubli Dharwad News | Kannada News | Karnataka News Hubli News | News In Hubli | Local news




