ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ ನೀಡಿದರು. ಕಳೆದ ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಿಕ್ಕೇರಿ ಬಸ್ ನಿಲ್ದಾಣದ ಆವರಣದ ಕಾಂಕ್ರೀಟ್ ನೆಲಹಾಸಿನ ಅಭಿವೃದ್ಧಿಯನ್ನು ಒಂದು ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ನಾರಾಯಣಗೌಡ ತಿಳಿಸಿದರು. ಕಿಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಜಯರಾಮಣ್ಣ, ಸದಸ್ಯ ಏಜಾಜ್ ಪಾಶ, ಜಿ.ಪಂ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮುಖಂಡರಾದ ಕೆ.ಜೆ.ತಮ್ಮಣ್ಣ, ಕಾಯಿಮಂಜೇಗೌಡ, ತಾ.ಪಂ ಉಪಾಧ್ಯಕ್ಷ ರವಿ, ಗುತ್ತಿಗೆದಾರ ಚಂದ್ರೇಗೌಡ, ಸಾರಿಗೆ ಇಇ ನಾಗರಾಜಮೂರ್ತಿ, ಎಇಇ ಶಿವಕುಮಾರ್, ಸಹಾಯಕ ಎಂಜಿನಿಯರ್ ಗಣೇಶ್, ಸೇರಿದಂತೆ ನೂರಾರು ಜನರು ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





