ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವ್ಯಾಪ್ತಿಯ ಜೇಳಂ ನದಿಯಲ್ಲಿ ತೆಲುತ್ತಿದ್ದ ಇಬ್ಬರು ಭಾರತೀಯರ ಮೃತದೇಹಗಳನ್ನು ಭಾರತೀಯ ಅಧಿಕಾರಿಗಳಿಗೆ ಪಿಒಕೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಬುಗ್ರಾನ್ ಪ್ರದೇಶದ ಯಾಸಿರ್ ಹುಸೈನ್ ಶಾ ಮತ್ತು ಕುಂಡಿ ಬರ್ಜಾಲಾ ಪ್ರದೇಶದ ಆಸಿಯಾ ಬಾನೋ ಎಂದು ಗುರುತಿಸಲಾಗಿದೆ. ಇಂದು ಉರಿ ಪ್ರದೇಶದಲ್ಲಿ ಸಭೆ ನಡೆಸಿ, ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಈ ವೇಳೆ ಉಭಯ ರಾಷ್ಟ್ರಗಳ ಅಧಿಕಾರಿಗಳು, ಮೃತರ ಪೋಷಕರು ಸೇರಿದಂತೆ ವೈದ್ಯರು ಸ್ಥಳದಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

