Breaking News
Oplus_131072

ಚಾಕುವಿನಿಂದ ಇರಿದವರನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ..!

ಕೊರಿಯರ್‌ನಲ್ಲಿ ಬಂದ ಪಾರ್ಸೆಲ್‌ನ್ನ ಕೊಡುವ ವಿಚಾರಕ್ಕೆ ಗಲಾಟೆ ಶುರುವಾಗಿ, ಅದು ವಿಕೋಪಕ್ಕೆ ತಿರುಗಿದೆ. ಈ ಘಟನೆ ನಡೆದಿದ್ದು ಕೋಲಾರದ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ. ಇಲ್ಲಿನ ಚೇತನ್‌ ಮತ್ತು ಯುವರಾಜ್‌ ಎಂಬುವರ ಮೇಲೆ, ನಗರದ ಕೀಲುಕೋಟೆ ನಿವಾಸಿಗಳಾದ ಪವನ್‌ ಮತ್ತು ಮೋಹನ್‌ ಹಲ್ಲೆ ನಡೆಸಿದ್ದಾರೆ. ಇವರಿಬ್ಬರೂ ಚೇತನ್‌-ಯುವರಾಜ್‌ ಮೇಲೆ ಚಾಕುವಿನಿಂದ ಇರಿದಿದ್ದನ್ನ ನೋಡಿ ಕ್ರೋಧಗೊಂಡ ಗ್ರಾಮಸ್ಥರು, ಪವನ್‌ ಮತ್ತು ಮೋಹನ್‌ಗೆ ಬಟ್ಟೆ ಬಿಚ್ಚಿ, ಕಟ್ಟಿಹಾಕಿದ್ದಾರೆ. ಬಳಿಕ ಮನಸಿಗೆ ಬಂದಂತೆ ಥಳಿಸಿದ್ದಾರೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಗಾಯಾಳುಗಳಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಾಕು ಇರಿದ ಮೋಹನ್ ಹಾಗೂ ಪವನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *