Breaking News

ಬರೇಲಿ : ಕುಡಿದ ಮತ್ತಿನಲ್ಲಿ ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾರ ಹಾಕಿದ ವರ..!

ವರ ಕುಡಿದು ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಮುಹೂರ್ತ ಮೀರಿದ ಮೇಲೆ ಬಂದ ಕಾರಣಕ್ಕೆ ವಧುವೊಬ್ಬಳು ಮದುವೆಯನ್ನೇ ರದ್ದು ಮಾಡಿದ್ದ ಘಟನೆ ನಡೆದಿತ್ತು.ಕಂಠಪೂರ್ತಿ ಕುಡಿದಿದ್ದ ವರನಿಗೆ ವಧು ಯಾರು ಸ್ನೇಹಿತ ಯಾರು ಎಂದು ತಿಳಿಯದೇ ವರಮಾಲೆಯನ್ನು ವಧುವಿನ ಬದಲು ಪಕ್ಕದಲ್ಲಿದ್ದ ಸ್ನೇಹಿತನ ಕುತ್ತಿಗೆಗೆ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.ಇದೇ ವೇಳೆ ವಧುವಿನ ಕುಟುಂಬದವರು ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರಾದರೂ ವಧು ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಇಂತಹ ಜವಾಬ್ದಾರಿ ಇಲ್ಲದ ವರನನ್ನು ಯಾವುದೇ ಕಾರಣಕ್ಕೂ ಮದುವೆಯಾಗಲಾರೆ ಎಂದು ಹೇಳಿದ್ದಾಳೆ. ನಂತರ ವಧುವಿನ ತಂದೆ ವರ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಸಾರ್ವಜನಿಕ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ ಎಂದು ವರದಿಯಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *