Breaking News

ಯುವತಿಯ ಅಪಹರಣ; ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರ.!!!

ಬಿಹಾರ ಮೂಲ ನಿವಾಸಿಯಾಗಿದ್ದ ಸಂತ್ರಸ್ತ ಯುವತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದಳು; ಆದರೆ ಅವಳಿಗೆ ಆ ಕೆಲಸ ಇಷ್ಟವಿಲ್ಲದ ಕಾರಣ ಬೆಂಗಳೂರಿನಲ್ಲಿ ತನ್ನ ಸಹೋದರನ ಬಳಿ ಹೋಗಲು ನಿರ್ಧರಿಸಿದ್ದಳು. ಕೇರಳದ ಎರ್ನಾಕುಲಂನಿಂದ ರೈಲು ಹತ್ತಿದ್ದ ಯುವತಿ ಈ ಬಗ್ಗೆ ತನ್ನ ಸಹೋದರನಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಳು.ಆರೋಪಿಗಳು ಯುವತಿಯ ಸಹೋದರನನ್ನ ಥಳಿಸಿ ಆತನನ್ನು ಗಾಯಗೊಳಿಸಿದರು ಮತ್ತು ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು. ಸಂತ್ರಸ್ತ ಯುವತಿಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ನಾಗರಿಕರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು 2 ಮುಸ್ಲಿಮರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳ ಹೆಸರುಗಳು ಆಸಿಫ್ ಮತ್ತು ಸೈಯದ್ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *