Breaking News
Featured Video Play Icon

ಕಾರ್ಪೋರೆಟರ್ ಮಗಳ ಭೀಕರ ಕೊಲೆ:ಬಿವ್ಹಿಬಿ ಕ್ಯಾಂಪಸ್ ನಲ್ಲಿ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿ..!

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳನ್ನು ಮನಬಂದಂತೆ ಚಾಕು ಇರಿದು ಕೊಲೆಗೈದ ಘಟನೆ ನಗರದ ಪ್ರತಿಷ್ಟಿತ ಬಿವಿಬಿ ಕಾಲೇಜು ಕ್ಯಾಂಪಸ್‌ ನಲ್ಲಿ ನಡೆದಿದೆ.ನೇಹಾ ಹಿರೇಮಠ (24) ಸಾವನ್ನಪ್ಪಿದ ಮೃತ ಯುವತಿಯಾಗಿದ್ದು, ಈಕೆ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಮಗಳಾಗಿದ್ದಾಳೆ. ಬಿವಿಬಿಯಲ್ಲಿ ಎಂಸಿಎ ಪ್ರಥಮ‌ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ.

ಇಂದು ಕಾಲೇಜಿನಲ್ಲಿ ಪರೀಕ್ಷೆಯಿದ್ದ ತೆರಳಿದ್ದ ವೇಳೆ ಯಾರೋ ದುಷ್ಕರ್ಮಿಯೊರ್ವ ಏಕಾಏಕಿ ಕುತ್ತಿಗೆಗೆ ಚಾಕು ಹಾಕಿದ್ದು, ಬಳಿಕ ಬೆನ್ನು, ಹೊಟ್ಟೆಗೆ ಇರಿದಿದ್ದಾನೆ.ಅಷ್ಟಾಗಲೇ ನೇಹಾ ರಕ್ತದ ಮಡುವಿನಲ್ಲಿ ಬಿದಿದ್ದು, ಕೂಡಲೇ ಸ್ಥಳೀಯ ಸಹಪಾಠಿಗಳು ಹಾಗೂ ಕಾಲೇಜಿನ ಪ್ರೊಫೆಸರ್’ಗಳು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ.ಇನ್ನೂ ಕಿಮ್ಸ್ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಷಯ ತಿಳಿದು ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *