ಮಾಜಿ ಗಂಡನ ಸಹೋದರನನ್ನು ಮದುವೆಯಾಗಿದ್ದ ಮಹಿಳೆಯನ್ನು ಮಾಜಿ, ಹಾಲಿ ಗಂಡಂದಿರು ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಸಮಾಧಿ ಮಾಡಿ ಒಂದೂವರೆ ವರ್ಷಗಳ ಬಳಿಕ ಇದೀಗ ಪ್ರಕರಣ ಬೆಳಕಿಗೆ ಬಂದಿದೆ.ಕೊನೆಯಲ್ಲಿ ಆಕೆಯ ಅವಶೇಷಗಳನ್ನು ಪೊಲೀಸರು ಪತ್ತೆ ಮಾಡಿದ್ದರು.ವಿಚಾರಣೆಯ ಸಮಯದಲ್ಲಿ, ಸಹೋದರರು ಆಶಿಫಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನೈವಾಲಾ-ಹಲ್ಲುಪುರ ರಸ್ತೆಯ ಕಸದ ರಾಶಿಯ ಬಳಿ ಹೂತುಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಪರಾಧಕ್ಕೆ ತಮ್ಮ ಚಿಕ್ಕಮ್ಮ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.ತಪ್ಪೊಪ್ಪಿಗೆಯ ಆಧಾರದ ಮೇಲೆ ಸ್ಥಳದಿಂದ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಸ್ತುತ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆದಿಲ್ ಮತ್ತು ಆತನ ಸಹೋದರ ಕಾಮಿಲ್‌ನನ್ನು ಬಂಧಿಸಿದ್ದಾರೆ ಮತ್ತು ತಲೆಮರೆಸಿಕೊಂಡಿರುವ ಚಿಕ್ಕಮ್ಮನನ್ನು ಬಂಧಿಸಲು ಸಹ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

