ಮಾನಸಿಕ ಅಸ್ವಸ್ಥಳಾಗಿದ್ದ ಹಿನ್ನೆಲೆ ಭಾಮಾ ಕುಟುಂಬದವರು ಸದಾ ಆಕೆಯ ಸುತ್ತಮುತ್ತಲೇ ಇರುತ್ತಿದ್ದರು. ಒಂದು ರೀತಿ ಕಾವಲು ಕಾಯುತ್ತಿದ್ದರು ಎಂದೇ ಹೇಳಬಹುದು. ಬೆಳಗಿನ ಜಾವ 2:30ಕ್ಕೆ, ಸಣ್ಣ ಶಬ್ದಕ್ಕೆ ದಿಢೀರ್ ಎಚ್ಚರಗೊಂಡ ಭಾಮಾ ಸಹೋದರಿ, ಆಕೆಯ ಕೋಣೆಯನ್ನು ನೋಡಿದ್ದಾರೆ. ಆದರೆ, ಅಲ್ಲಿ ಭಾಮಾ ಮಾತ್ರವಲ್ಲದೇ ಮಕ್ಕಳು ಇಲ್ಲದಿರುವುದು ಕಂಡು ಅಚ್ಚರಿಗೆ ಒಳಗಾಗಿದ್ದರು.ತಕ್ಷಣವೇ ನೆರೆಹೊರೆಯವರ ಸಹಾಯದಿಂದ, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಆದ್ರೆ, ಬಹಳ ಸಮಯದ ನಂತರ ಮನೆಯಲ್ಲಿದ್ದ ಬಾವಿಯಲ್ಲಿ ಮೂವರು ಜಿಗಿದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ವಲಪಟ್ಟಣಂ ಪೊಲೀಸರು, ಸ್ಥಳಕ್ಕೆ ಧಾವಿಸಿ ದೇಹಗಳಿಗಾಗಿ ಶೋಧ ನಡೆಸಿದರು. ಮಕ್ಕಳ ಚಪ್ಪಲಿ ಯಾವುದರ ಸುಳಿವು ಸಿಗದ ಹಿನ್ನೆಲೆ ಬಾವಿಗೆ ಹಾರಿರುವುದನ್ನು ಮೊದಲು ಪತ್ತೆಹಚ್ಚುವುದು ಕಷ್ಟಕರವಾಗಿದೆ. ನಂತರದಲ್ಲಿ ಅಗ್ನಿಶಾಮಕ ದಳದ ಸಹಾಯದಿಂದ ಬಾವಿಯಲ್ಲಿದ್ದ ಮಕ್ಕಳು ಮತ್ತು ಭಾಮಾ ಮೃತದೇಹಗಳನ್ನು ಹೊರತರಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

