ಮೈಸೂರು: ಜಿಲ್ಲೆಯಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತರ್ಜಾತಿ ವಿವಾಹವೂ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ.ಕಳೆದ ಮೂರು ವರ್ಷದಲ್ಲಿ ಮೈಸೂರಿನಲ್ಲಿ 900ಕ್ಕೂ ಹೆಚ್ಷು ದಂಪತಿಗಳು ವಿವಿಧ ವಿವಾಹಗಳ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವಿವಿಧ ವಿವಾಹ ಯೋಜನೆಯಡಿ ನಾನಾ ಸೌಲಭ್ಯಗಳನ್ನು ನೀಡುತ್ತಿದೆ. ಪರಿಣಾಮ ಹೆಚ್ಚು ಹೆಚ್ಚು ಮಂದಿ ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ
ಕಳೆದ ಮೂರು ವರ್ಷದ ಅಂಕಿ ಅಂಶ ಗಮನಿಸಿದರೆ ಒಟ್ಟು 1089 ಮಂದಿ ವಿವಿಧ ವಿವಾಹಗಳ ಯೋಜನೆ ಅಡಿ ಅರ್ಜಿ ಹಾಕಿದ್ದು, ಅದರಲ್ಲಿ 906 ದಂಪತಿಗೆ ಪ್ರೋತ್ಸಾಹಧನ ದೊರೆತಿದೆ. ಸರಕಾರದಿಂದ 20 ಕೋಟಿ ರೂ.ಬಿಡುಗಡೆಯಾಗಿದ್ದು, ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಲಾಖೆಯು ತನ್ನದೆ ಕೊಡುಗೆಯನ್ನು ನೀಡುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





