ಬೇಲೂರು: ಪಟ್ಟಣದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಇಬ್ಬರು ಯುವಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಒಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಜ್ವಲ್ ಬಂಧಿತ ಆರೋಪಿ. ಶರತ್ ಗಾಯಗೊಂಡಿದ್ದು, ಈತ ಬೇಲೂರು ಪಟ್ಟಣದ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಅದೇ ಯುವತಿಯನ್ನು ಪಟ್ಟಣದ ಮತ್ತೊಬ್ಬ ಯುವಕ ಆರೋಪಿ ಸಹ ಪ್ರೀತಿಸುತ್ತಿದ್ದನು. ಈ ವಿಚಾರವಾಗಿ ಇಬ್ಬರ ನಡುವೆ ಹಾಗಿಂದಾಗ್ಗೆ ಸಣ್ಣಪುಟ್ಟ ಗಲಾಟೆ, ಮಾತಿನ ಚಕಮಕಿ ನಡೆಯುತಿತ್ತು. ಇದೇ ವಿಚಾರವಾಗಿ ಶರತ್‌ನನ್ನು ಮಾತನಾಡಿಸಲು ಹೋಟೆಲ್ ಬಳಿಗೆ ಪ್ರಜ್ವಲ್ ಬಂದ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆರೋಪಿ ಪ್ರಜ್ವಲ್ ತಾನು ತಂದಿದ್ದ ಚಾಕುವಿನಿಂದ ಶರತ್‌ನ ಕುತ್ತಿಗೆ, ಕೆನ್ನೆ ಹಾಗೂ ಬೆನ್ನಿಗೆ ಇರಿದಿದ್ದಾನೆ. ಇದರಿಂದ ಶರತ್ ಗಾಯಗೊಂಡಿದ್ದಾನೆ. ತಕ್ಷಣವೇ ಸಾರ್ವಜನಿಕರು ಮಧ್ಯಪ್ರವೇಶಿಸಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಆರೋಪಿ ತಪ್ಪಿಸಿಕೊಂಡಿದ್ದಾನೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಪಿಎಸ್‌ಐ ಶಿವನಗೌಡ ಜಿ.ಪಾಟೀಲ್ ಹಾಗೂ ಸಿಬ್ಬಂದಿ ದೇವರಾಜ್ ಗಾಯಾಳು ಶರತ್‌ನನ್ನು ಜಿಕಿತ್ಸೆಗಾಗಿ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜತೆಗೆ ತಪ್ಪಿಸಿಕೊಂಡಿದ್ದ ಪ್ರಜ್ವಲ್‌ನನ್ನು ಬಂಧಿಸಿ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

