Breaking News
Oplus_131072

ಕಾರೊಂದು ನದಿಗೆ ಬಿದ್ದು ಫರಿದಾಬಾದ್‌ನ ಒಂದೇ ಕುಟುಂಬದ ಐವರು ಮುಳುಗಿ ಸಾವು!!

ಆರು ಜನರು ಪ್ರಯಾಣಿಸುತ್ತಿದ್ದ ಕಾರು ಬೆಳಗ್ಗೆ 6 ಗಂಟೆ ಸುಮಾರಿಗೆ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಬಾಗ್ವಾನ್ ಗ್ರಾಮದ ಬಳಿ ಅಪಘಾತಕ್ಕೀಡಾಗಿ ಅಲಕನಂದಾ ನದಿಗೆ ಬಿದ್ದಿದೆ ಎಂದು ದೇವಪ್ರಯಾಗ ಸ್ಟೇಷನ್ ಹೌಸ್ ಆಫೀಸರ್ ಮಹಿಪಾಲ್ ಸಿಂಗ್ ರಾವತ್ ತಿಳಿಸಿದ್ದಾರೆ.ಫರಿದಾಬಾದ್‌ನ ಕುಟುಂಬವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಗೌಚರ್‌ನಲ್ಲಿ ಮದುವೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.ಮೃತ ದುರ್ದೈವಿಗಳು ಸುನಿಲ್ ಗುಸೇನ್ , ಅವರ ಪತ್ನಿ ಮೀನಾ, ಅವರ ಮಗ ಧೈರ್ಯ ಮತ್ತು ಮಗಳು ಸುಜಲ್ ಮತ್ತು ಮದನ್ ಸಿಂಗ್ ಗುಸೇನ್ ಅವರ ಮಗ ಆದಿತ್ಯ ಎಂದು ಗುರುತಿಸಲಾಗಿದೆ.ಆದಿತ್ಯ ಅವರ ತಾಯಿ ಅನಿತಾ ಅವರನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Share News

About BigTv News

Check Also

ಕಣ್ಣೂರು ಬಾಂಬ್ ದಾಳಿ ಪ್ರಕರಣ : 10 ಮಂದಿ ಸಿಪಿಎಂ ಕಾರ್ಯಕರ್ತರಿಗೆ 25 ವರ್ಷ ಜೈಲು ಶಿಕ್ಷೆ

ತಿಮಿರಿ ಬಾಂಬ್ ದಾಳಿ ಪ್ರಕರಣದಲ್ಲಿ ಕೇರಳದ ಕಣ್ಣೂರಿನ ತಳಿಪರಂಬ ನ್ಯಾಯಾಲಯ ಶನಿವಾರ 10 ಮಂದಿ ಸಿಪಿಎಂ ಕಾರ್ಯಕರ್ತರಿಗೆ 25 ವರ್ಷಗಳ …

Leave a Reply

Your email address will not be published. Required fields are marked *