ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ (Rameshwaram Café) ನಡೆದ ಸ್ಫೋಟದ್ದು ಎನ್ನಲಾದ ಸಿಸಿಟಿವಿ ದೃಶ್ಯವೊಂದು (CCTV Footage) ನ್ಯೂಸ್ 18ಗೆ ಲಭ್ಯವಾಗಿದೆ. ಸಿಸಿಟಿವಿ ದೃಶ್ಯದ ಪ್ರಕಾರ ಘಟನೆ ನಿಖರವಾಗಿ ಮಧ್ಯಾಹ್ನ 12.55ಕ್ಕೆ ನಡೆದಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿಗಳು ಸಹ ಸುಧಾರಿತ ಸ್ಫೋಟಕ ಬ್ಲಾಸ್ಟ್ ಆಗಿರೋದನ್ನು ಖಚಿತಪಡಿಸಿದ್ದಾರೆ. ಸ್ಫೋಟದಿಂದ ಇಡೀ ರಾಮೇಶ್ವರಂ ಕೆಫೆಯಲ್ಲಿ ಧೂಳು ಆವರಿಸಿಕೊಂಡಿದೆ. ಸ್ಪೋಟದಲ್ಲಿ ಒಟ್ಟು ಒಂಬತ್ತು ಜನರು ಗಾಯಗೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗಾಯಗೊಂಡವರ ವಿವರ

:1.ಫಾರಿಖ್ 19 ವರ್ಷ, ಹೋಟೆಲ್ ಸಿಬ್ಬಂದಿ2.ದೀಪಾಂಶು 23 ವರ್ಷ, ಅಮೇಜನ್ ಕಂಪನಿಯ ಸಿಬ್ಬಂಧಿ3.ಸ್ವರ್ಣಾಂಬ 40 ವರ್ಷ ಶೇ.40ರಷ್ಟು ಸುಟ್ಟ ಗಾಯ- ಬ್ರೂಕ್ ಫಿಲ್ಡ್ ಆಸ್ಪತ್ರೆಯ ಚಿಕಿತ್ಸೆ4.ಮೋಹನ್ 41 ವರ್ಷ5.ನಾಗಶ್ರೀ 35 ವರ್ಷ6.ಮೋಮಿ 30 ವರ್ಷ7.ಬಲರಾಮ್ ಕೃಷ್ಣನ್ 31 ವರ್ಷ8.ನವ್ಯಾ 25 ವರ್ಷ9.ಶ್ರೀನಿವಾಸ್ 67 ವರ್ಷಅಲೋಕ್ ಮೋಹನ್ ಪ್ರತಿಕ್ರಿಯೆ.ಸ್ಫೋಟದ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ (DIG Alok Mohan) ಪ್ರತಿಕ್ರಿಯೆ ನೀಡಿದ್ದು, ಸ್ಪೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಸದ್ಯಕ್ಕೆ ತಿಳಿದಿಲ್ಲ, ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ವಿದಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಂದ ವರದಿ ಬಂದ ನಂತರ ಸ್ಪಷ್ಟ ಮಾಹಿತಿ

ತಿಳಿಯಲಿದೆ ಎಂದರು.ರಾಮೇಶ್ವರಂ ಕೆಫೆಯಲ್ಲಿ ಸುಮಾರು ಒಂದು ಗಂಟೆಗೆ ಸ್ಪೋಟ ನಡೆದಿದೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಾಂತ್ರಿಕ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದೆ ಎಂದು ಅಲೋಕ್ ಮೋಹನ್ ಹೇಳಿದ್ದಾರೆ.ಬಾಂಬ್ ಸ್ಫೋಟದಲ್ಲಿ ಒಟ್ಟು 9 ಜನರಿಗೆ ಗಾಯಗೊಂಡಿದ್ದಾರೆ, ಯಾರಿಗೂ ಸೀರಿಯಸ್ ಆಗಿಲ್ಲ, ನಾವು ತನಿಖೆ ಮಾಡುತ್ತಿದ್ದೇವೆ. ಎಫ್ಎಸ್ಎಲ್ ತಂಡ ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದೆ. ಈ ಘಟನೆಗೆ ಕಾರಣನಾದ ಆರೋಪಿಯನ್ನ ನಾವು ಖಂಡಿತ ಪತ್ತೆ ಮಾಡುತ್ತೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

