Breaking News

ತಮಿಳುನಾಡು :ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ!!

ಉತ್ಸವದ ವೇಳೆ ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿರುಧುನಗರ ಜಿಲ್ಲಾಧಿಕಾರಿ ಜಯಶೀಲನ್ ತಿಳಿಸಿದ್ಧಾರೆ. ವಿರುಧುನಗರ ಜಿಲ್ಲೆಯ ಕರಿಸೇರಿ ಗ್ರಾಮದಲ್ಲಿ ಪ್ರಸ್ತುತ ದೇವಾಲಯ ಉತ್ಸವ ನಡೆಯುತ್ತಿದೆ. ಉತ್ಸವದ ಸಮಯದಲ್ಲಿ, ಧ್ವನಿವರ್ಧಕ ಅಳವಡಿಸುವ ಕೆಲಸ ನಡೆಯುತ್ತಿತ್ತು. ಆ ಸಮಯದಲ್ಲಿ, ತಿರುಪ್ಪತ್ತಿ ಎಂಬ ವ್ಯಕ್ತಿ ಆಕಸ್ಮಿಕವಾಗಿ ಧ್ವನಿವರ್ಧಕಗಳಿಗೆ ವಿದ್ಯುತ್ ಸಾಗಿಸುತ್ತಿದ್ದ ತಂತಿ ಮುಟ್ಟಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದರು.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *