ಮಡಿಕೇರಿ: ಪ್ರವಾಸಿಗರನ್ನು ಪಿಕಪ್ ಮಾಡಲು ಮುಂಜಾನೆ ತೆರಳಿದ್ದ 26 ವರ್ಷದ ಕಾರು ಚಾಲಕನ ಮೇಲೆ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಹರಿದು, ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿ ಗಣಪತಿ ಬೀದಿಯ ನಿವಾಸಿಗಳಾದ ನಜೀರ್ ಮತ್ತು ಶಾಹಿನ್ ಅವರ ಏಕೈಕ ಪುತ್ರ ಶಾಹಿಲ್ ಮೃತ ಯುವಕ. ಸಾಲ ಮಾಡಿ ಕಾರು ಖರೀದಿಸಿದ್ದ ಶಾಹಿಲ್, ಸಾಲ ತೀರಿಸಲು ಪ್ರತಿನಿತ್ಯ ಮುಂಜಾನೆ ಪ್ರವಾಸಿಗರನ್ನು ಪಿಕಪ್ ಮಾಡಲು ತೆರಳುತ್ತಿದ್ದರು. ಇಂದು ಮೈಸೂರು ರಸ್ತೆಯ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಮಂಗಳೂರು ಕಡೆಯಿಂದ ಬಂದ ಲಾರಿ ಆತನ ಮೇಲೆ ಹರಿದಿದೆ. ಘಟನೆಗೆ ಸಂಬಂಧಿಸಿ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೃತ ಶಾಹಿಲ್‌ಗೆ ಶೀಘ್ರದಲ್ಲೇ ವಿವಾಹ ಮಾಡಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಕಾರು ಚಾಲಕರ ಸಂಘದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

