ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಸಿವಿಲ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.ಹಲವು ದಿನಗಳಿಂದ ಪ್ರತ್ಯೇಕವಾಗಿ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ಈ ಪೆಡ್ಲರ್‌ಗಳು ತೊಡಗಿದ್ದ ಬಗ್ಗೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳಕ್ಕೆ ಖಚಿತ ಮಾಹಿತಿ ಸಿಕ್ಕಿತು. ಅಂತೆಯೇ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಬೇಗೂರು ಕೆರೆ ಬಳಿ ಕ್ರಿಸ್ಟೋಫರ್‌ನನ್ನು ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ್ ಹಾಗೂ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಸಮೀಪ ಜಿಜೋನನ್ನು ಇನ್‌ಸ್ಪೆಕ್ಟರ್ ಮಹಮ್ಮದ್ ಮಕ್ರಂ ನೇತೃತ್ವದ ತಂಡವು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ತಮ್ಮ ಪರಿಚಿತ ಗ್ರಾಹಕರಿಗೆ ಮಾತ್ರ ಆರೋಪಿಗಳು ಡ್ರಗ್ಸ್ ಪೂರೈಸುತ್ತಿದ್ದರು. ಈ ಡ್ರಗ್ಸ್ ದಂಧೆಯೂ ಆನ್‌ಲೈನ್ ಮೂಲಕ ನಡೆದಿತ್ತು. ತಮಗೆ ಆನ್‌ಲೈನ್ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದ ಆರೋಪಿಗಳು, ಬಳಿಕ ತಾವು ಗೌಪ್ಯ ಸ್ಥಳದಲ್ಲಿ ಡ್ರಗ್ಸ್ ತಂದಿಟ್ಟು ನಂತರ ಗ್ರಾಹಕರಿಗೆ ಲೋಕೇಷನ್ ಕಳುಹಿಸುತ್ತಿದ್ದರು. ಆ ಲೋಕೇಷನ್‌ಗೆ ತೆರಳಿ ಡ್ರಗ್ಸ್ ತೆಗೆದುಕೊಂಡು ಗ್ರಾಹಕರು ತೆರಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

