Breaking News

ಚಾ.ನಗರ, ಮಂಗಳೂರು, ಹಾವೇರಿ ಕೋರ್ಟ್‌ಗೆ ಬಾಂಬ್ ಬೆದರಿಕೆ ಮೇಲ್

ಚಾಮರಾಜನಗರ/ಮಂಗಳೂರು/ಹಾವೇರಿ: ರಾಜ್ಯದ ಚಾಮರಾಜನಗರ, ಮಂಗಳೂರು ಹಾಗೂ ಹಾವೇರಿ ನ್ಯಾಯಾಲಯಗಳಿಗೆ ಸೋಮವಾರ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆದರಿಕೆ ಸಂದೇಶದ ಬಳಿಕ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ನ್ಯಾಯಾಲಯಗಳ ಆವರಣದಲ್ಲಿ ತಪಾಸಣೆ ನಡೆಸಿದರು. ಚಾಮರಾಜನಗರ ನ್ಯಾಯಾಲಯಕ್ಕೆ ವಾರದ ಅಂತರದಲ್ಲಿ ಇದು ಮೂರನೇ ಬಾರಿ ಬೆದರಿಕೆ ಇ-ಮೇಲ್ ಬಂದಿದೆ. ಮಂಗಳೂರು ಹಾಗೂ ಹಾವೇರಿ ನ್ಯಾಯಾಲಯಗಳಲ್ಲೂ ಶೋಧ ನಡೆಸಿದ ಬಳಿಕ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಬಂದಿದ್ದ ಬೆದರಿಕೆಗಳು ಹುಸಿ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *