Breaking News
Oplus_131072

ಬೆಳ್ತಂಗಡಿ: ನದಿಯಲ್ಲಿ ಕಾಲು ಜಾರಿ ಗುಂಡಿಗೆ ಬಿದ್ದು ಯುವಕ ಸಾವು.!

ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಮನ್ಸೂರ್‌ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬನ್ನೂರು ಪೊಲೀಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್‌ ಮೃತ ಯುವಕ. ಮೃತದೇಹವನ್ನು ಬನ್ನೂರು ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಬಿಟ್ಟುಕೊಡಲಾಗುವುದು ಎಂದು ಬನ್ನೂರು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *