ಮಾಸೂರು ಗ್ರಾಮದ ವಿಶ್ವನಾಥ್ ಮತ್ತು ಮೋಹಿನಿ ದಂಪತಿಯ ಪುತ್ರಿ ಯಶಸ್ವಿ ವಿ. (17) ಮೃತ ವಿದ್ಯಾರ್ಥಿನಿ. ಸಾಗರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಶಸ್ವಿಗೆ ಕಳೆದ ಕೆಲ ದಿನಗಳಿಂದ ಅಡ್ಡೇರಿ ಗ್ರಾಮದ ಸುಮುಖ ಎಂಬ ಯುವಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾನಸಿಕ ಕಿರುಕುಳ ತಾಳಲಾರದೆ ಐದು ದಿನಗಳ ಹಿಂದೆ ಯಶಸ್ವಿ ವಿಷ ಸೇವಿಸಿದ್ದರು. ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿ ಮೃತಪಟ್ಟಿದ್ದಾರೆ. ಈ ಸಂಬಂಧ ಯಶಸ್ವಿಯ ಪೋಷಕರು ಸುಮುಖ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

